ಒಟ್ಟು 81 ಕಡೆಗಳಲ್ಲಿ , 1 ವಚನಕಾರರು , 67 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಕು ಜೋಳಿಗೆ ಲೇಸು | ಮುರುಕ ಹಪ್ಪಳ ಲೇಸು | ಕುರುಕುರೂ ಕಡಲೆ ಬಲು ಲೇಸು ಪಾಯಸದ | ಸುರುಕು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹಲ್ಲು ಎಲುವೆಂಬುದನು | ಎಲ್ಲವರು ಬಲ್ಲರೆಲೆ | ನಿಲ್ಲದಲೆ ಎಲುವಿನಿಂದೆಲ್ಲವಗಿದ ಬಳಿ | ಕೆಲ್ಲಿಯದು ಶೀಲ ಸರ್ವಜ್ಞ ||
--------------
ಸರ್ವಜ್ಞ
ಹಸಿದರಂಬಲಿ ಲೇಸು | ಬಿಸಿಲಲ್ಲಿ ಕೊಡೆ ಲೇಸು | ಬಸುರಿನಾ ಸೊಸೆಯು ಇರ ಲೇಸು | ಸಭೆಗೊಬ್ಬ ರಸಿಕನೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಹಾರುವರು ಸ್ವರ್ಗದ | ದಾರಿಯನು ಬಲ್ಲರೇ | ನಾರಿ ಪತಿವ್ರತದಿ ನಡೆಯೆ ಸ್ವರ್ಗದಾ | ದಾರಿ ತೋರುವಳು ಸರ್ವಜ್ಞ ||
--------------
ಸರ್ವಜ್ಞ
ಹಾಲಿನಾ ಹಸು ಲೇಸು | ಶೀಲದಾ ಶಿಶು ಲೇಸು ಬಾಲೆ | ಸಜ್ಜನೆಯ ಬಲು ಲೇಸು ಹುಸಿಯದಾ | ನಾಲಿಗೆಯು ಲೇಸು ಸರ್ವಜ್ಞ ||
--------------
ಸರ್ವಜ್ಞ
ಹುಲಿಯ ಬಾಯಲ್ಲಿ ಸಿಕ್ಕ | ಹುಲ್ಲೆಯಂದದಿ ಮೊರವೆ | ಬಲಿಯ ಬಿಡಿಸೆನ್ನ ಗುರುರಾಯ ಮರೆಹೊಕ್ಕೆ | ಕೊಲುತಿಹಳು ಮಾಯೆ ಸರ್ವಜ್ನ್ಯ ||
--------------
ಸರ್ವಜ್ಞ
ಹೊಲಸು ಮಾಂಸದ ಹುತ್ತ | ಎಲುವಿನ ಹಂಜರವು ಹೊಲೆ ಬಲಿದು ತನುವಿನೊಳಗಿರ್ದು - ಮತ್ತದರಿ ಕುಲವನೆಣೆಸುವರೆ ಸರ್ವಜ್ಞ
--------------
ಸರ್ವಜ್ಞ