ಒಟ್ಟು 780 ಕಡೆಗಳಲ್ಲಿ , 1 ವಚನಕಾರರು , 772 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸಾರವನು ಬಯಸುವೊಡೆ | ಕ್ಷಾರವನು ಧರಿಸುವುದು ಮಾರಸಂಹರನ ನೆನೆದರೆ - ಮೃತ್ಯು ತಾ ದೊರಕ್ಕೆ ದೊರ ಸರ್ವಜ್ಞ
ಸಾಲ ಬಡವಂಗೆ ಹೊಲ್ಲ | ನಾಲಗೆಗೆ ಹುಸಿ ಹೊಲ್ಲ | ಹಾಲಿನಾ ಕೊಡಕೆ ಹುಳಿಹೊಲ್ಲ ಕಾಲಿಗಂ | ಕೋಲಿ ಹೊಲ್ಲೆಂದ ಸರ್ವಜ್ಞ ||
ಸಾಲ ಬಡವಗೆ ಹೊಲ್ಲ | ಸೋಲು ಜೂಜಿಗೆ ಹೊಲ್ಲ | ಬಾಲರು ಬೆನ್ನಲಿರ ಹೊಲ್ಲ ಬಡವಂಗೆ | ಓಲಗವೇ ಹೊಲ್ಲ ಸರ್ವಜ್ಞ ||
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
ಸಾಲವನು ತರುವಾಗ | ಹಾಲು ಬೋನುಂಡಂತೆ | ಸಾಲಿಗನು ಬಂದು ಕೇಳಿದರೆ ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ ||
ಸಾಲವನು ಮಾಡುವದು | ಹೇಲ ತಾ ಬಳಿಸುವದು | ಕಾಲಿನ ಕೆಳಗೆ ಕೆಡಹುವದು ತುತ್ತಿನಾ | ಚೀಲ ನೋಡಯ್ಯ ಸರ್ವಜ್ಞ ||
ಸಾಲಿಗನಲಿ ಮೇಣಕ್ಕ | ಸಾಲೆಯಲಿ ನಂಬಿಕೆಯು | ಜಾಲಗಾರನ ದಯೆ ಧರ್ಮ ಮುನ್ನಾವ | ಕಾಲಕ್ಕೂ ಇಲ್ಲ ಸರ್ವಜ್ಞ ||
ಸಾಲುವೇದವನೋದಿ | ಶೀಲದಲಿ ಶುಚಿಯಾಗಿ | ಶೂಲಿಯಾವದವನರಿಯದೊಡೆ ಗಿಳಿಯೋದಿ | ಹೇಲ ತಿಂದಂತೆ ಸರ್ವಜ್ಞ ||
ಸಾವ ಸಂಕಟ ಹೊಲ್ಲ | ಹಾವಿನ ವಿಷವು ಹೊಲ್ಲ | ನಾವಿಗನ ಕೂಡ ಹಗೆ ಹೊಲ್ಲ ಚಿಕ್ಕವರ | ಕಾವುದೇ ಹೊಲ್ಲ ಸರ್ವಜ್ಞ ||
ಸಿಂಗಕ್ಕೆ ಗುರು ಬರಲು | ಸಂಗರವು ಘನವಕ್ಕು ಅಂಗನೆಯರಿಗೆ ಬಾಧೆ ಪಿರಿದಕ್ಕು ಕಡೆ ಮಳೆ | ಹಿಂಗಾರಿಯಕ್ಕು ಸರ್ವಜ್ಞ ||
ಸಿದ್ಧರಿಗೆ ಯೋಗವನು | ಬುದ್ಧಿವಂತಗೆ ಮತಿಯ | ಬಿದ್ದ ಅಡಿವಿಯಾ ಕಿಚ್ಚನಂ ಮುಳ್ಳು ಮೊಳೆ | ತಿದ್ದುವವರಾರು ಸರ್ವಜ್ಞ ||
ಸಿರಿಯ ಸಂಸಾರವು | ಸ್ಥಿರವೆಂದು ನಂಬದಿರು | ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ | ಹರಿದು ಹೋದಂತೆ ಸರ್ವಜ್ಞ ||
ಸಿರಿಯಣ್ಣನುಳ್ಳತನಕ | ಹಿರಿಯಣ್ಣ ನೆನೆಸಿಪ್ಪ | ಸಿರಿಯಣ್ಣ ಹೋದ ಮರುದಿನವೆ ಹಿರಿಯಣ್ಣ | ನರಿಯಣ್ಣನೆಂದ ಸರ್ವಜ್ಞ ||
ಸೀತಧಾತುಗಳುಂಟು | ಜಾತಿಹವು ಕುಕ್ಷಿಗಳು | ಪಾತಕರು ಮರದಿ ತಿರಿದುಂಬ ನಾಡಿಗೆ | ಏತಕ್ಕೆ ಬಹರು ಸರ್ವಜ್ಞ ||
ಸೀತೆಯಿಂ ಹೆಣ್ಣಿಲ್ಲ | ಸೂತನಿಂದಾಳಿಲ್ಲ | ಮಾತಿನಲಿ ಸೋತಗಿದಿರಿಲ್ಲ ಶೂದ್ರಂಗೆ | ಭೀತಿಯೇ ಇಲ್ಲ ಸರ್ವಜ್ಞ ||