ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸತ್ತಕತ್ತೆಯ ಹೊತ್ತ | ಕೆತ್ತಣದ ಹೊಲೆಯನವ | ಉತ್ತಮನು ಎಂದು ಹೆರರೊಡನೆ ಹೊತ್ತವನೆ | ನಿತ್ಯವೂ ಹೊಲೆಯ ಸರ್ವಜ್ಞ ||
ಸತ್ತವರಿಗತ್ತು ಬೇ | ಸತ್ತರವರುಳಿವರೇ | ಹತ್ತೆಂಟು ಕಾಲ ತಡನಕ್ಕು ಬಳಿಕೆಗೆಲ್ಲ | ರತ್ತಲೇ ಅಕ್ಕು ಸರ್ವಜ್ಞ ||
ಸತ್ತುದನು ತಿಂಬಾತ | ಎತ್ತಣದ ಹೊಲೆಯನವ | ಒತ್ತಿ ಜೀವದೆ ಕೊರಳಿರಿದು ತಿಂಬಾತ | ಉತ್ತಮದ ಹೊಲೆಯ ಸರ್ವಜ್ಞ ||
ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ | ಹಸ್ತದಿಂದಧಿಕಹಿತರಿಲ್ಲ ಪರದೈವ | ನಿತ್ಯನಿಂದಿಲ್ಲ ಸರ್ವಜ್ಞ ||
ಸತ್ಯಕ್ಕೆ ಸರಿಯಿಲ್ಲ | ಮಿಥ್ಯಕ್ಕೆ ನೆಲೆಯಿಲ್ಲ | ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ | ನಿತ್ಯರೇ ಇಲ್ಲ ಸರ್ವಜ್ಞ ||
ಸತ್ಯನುಡಿದತ್ತರೂ | ಸುತನೊಬ್ಬ ಸತ್ತರೂ | ಸತ್ಯವನು ಬಿಡದ ಹರಿಶ್ಚಂದ್ರ ಜಗದೊಳು | ಸ್ತುತ್ಯನಾಗಿಹನು ಸರ್ವಜ್ಞ ||
ಸತ್ಯರಿಗೆ ಧರೆಯೆಲ್ಲ | ಮಸ್ತಕವನೆರಗುವದು | ಹೆತ್ತ ತಾಯ್ಮಗನ ಕರೆವಂತೆ ಶಿವನವರನೆತ್ತಿ ಕೊಂಬುವನು ಸರ್ವಜ್ಞ ||
ಸತ್ಯರೂ ಹುಸಿಯುವಡೆ | ಒತ್ತಿ ಹರಿದರೆ ಶರಧಿ | ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ| ಸಾಗುವದು ಸರ್ವಜ್ಞ ||
ಸತ್ಯವೆಂಬುದು ತಾನು | ನಿತ್ಯದಲಿ ಮರೆದಿಹುದು | ಮಿಥ್ಯ ಸತ್ಯವನು ಬೆರೆದರೂ ಇಹಪರದಿ | ಸತ್ಯಕ್ಕೆ ಜಯವು ಸರ್ವಜ್ಞ ||
ಸಂದ ಮೇಲ್ಸುಡುವದು | ಬೆಂದಮೇಲುರಿವುದು | ಬಂಧಗಳನೆದ್ದು ಬಡಿವುದು ನೀವದರ | ದಂದುಗವ ನೋಡಿ ಸರ್ವಜ್ಞ ||
ಸಂದಿರ್ದ ಮಾಸವನು | ಕುಂದದಿಮ್ಮಡಿ ಮಾಡಿ | ಅಂದಿನಾ ತಿಥಿಯ ನೊಡಗೂಡಲಾ ತಾರೆ | ಮುಂದೆ ಬಂದಿಹುದು ಸರ್ವಜ್ಞ ||
ಸಪ್ಪನ್ನ ಉಣಹೊಲ್ಲ | ಮುಪ್ಪು ಬಡವಗೆ ಹೊಲ್ಲ | ತಪ್ಪಿನಲಿಸಿಲುಕಿ ಇರಹೊಲ್ಲ ಜಾರೆಯನು ಅಪ್ಪುವದೆ ಹೊಲ್ಲ ಸರ್ವಜ್ಞ ||
ಸರ್ವಾಂತರ್ಯಾಮಿ | ಓರ್ವನೆಂಬುವ ತತ್ವ | ನಿರ್ದಿಷ್ಟವಾಗಿ ಇರುತಿರಲು ಮೋಕ್ಷವದು | ಸರ್ವರಿಗೆ ಸುಲಭ ಸರ್ವಜ್ಞ ||
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ ಕಾಣೆಸುತಿಹುದು ಸರ್ವಜ್ಞ
ಸಾದರಿಗೆ ಮಾದರಿಗೆ | ಭೇದವೇನಿಲ್ಲಯ್ಯ | ಮಾದಿಗನು ತಿಂಬ ಸತ್ತುದನು ಸಾದ ತನ | ಗಾದವರೆ ತಿಂಬ ಸರ್ವಜ್ಞ |