ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ರಾಗಿಯನ್ನು ಉಂಬುವ ನಿ | ರೋಗಿ ಎಂದೆನಿಸುವನು | ರಾಗಿಯು ಭೋಗಿಗಳಿಗಲ್ಲ ಬಡವರಿಂ | ಗಾಗಿ ಬೆಳೆದಿಹುದು ಸರ್ವಜ್ಞ ||
ರಾತ್ರಿಯೊಳು ಶಿವರಾತ್ರಿ | ಜಾತ್ರೆಯೊಳು ಶ್ರ್‍ಈಶೈಲ | ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ | ಸ್ತೋತ್ರದೊಳಗಧಿಕ ಸರ್ವಜ್ಞ ||
ರಾಮನಾಮವೆ ನಾಮ | ಸೋಮ ಶಂಕರ ಗುರುವು ಆ ಮಹಾರುದ್ರ ಅಧಿದೈವ ಜಗದೊಳಗೆ | ಭೀಮನೇ ಭಕ್ತ ಸರ್ವಜ್ಞ ||
ರುಚಿಗಳಿಗೆ ನೆರೆಗಳೆದು | ಶುಚಿಗಲಿ ಮೆರೆವಂಗೆ ಪಚನವದು ಬೆಳಗಿ ಬಲದಿ ಬಾಳುವನೆಂಬಿ | ವಚನವೊಂದಿಹುದು ಸರ್ವಜ್ಞ ||
ರುದ್ರಕರ್ತನು ತಾನು | ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು | ಗೆದ್ದವನು ಆರು ಸರ್ವಜ್ಞ ||
ರುದ್ರಾಕ್ಷಿಯ ಮಾಲೆಯ | ಭದ್ರದಲಿ ಧರಿಸಿದಗೆ ಹೊದ್ದಿರ್‍ದ ಪಾಪ ಹೋಗಲವ ಸಾಕ್ಷಾತ | ಮಾಲೆಯ ರುದ್ರನೇ ಸರ್ವಜ್ಞ ||
ಲಜ್ಜೆಯನು ತೊರೆದು ನೀ | ಹೆಜ್ಜೆಯನು ಸಾಧಿಪಡೆ | ಸಜ್ಜೆಯಲಿ ಶಿವನ ಶರಣರಾ - ಹೆಜ್ಜೆಯಲಿ ನಡೆಯೋ ಸರ್ವಜ್ಞ ||
ಲಿಂಗ ಉಳ್ಳನೆ ಪುರುಷ | ಲಿಂಗ ಉಳ್ಳನೆ ಸರಸ ಲಿಂಗ ಉಳ್ಳವಗೆ ರತಿಭೋಗ - ವತುಳಸುಖ ಲಿಂಗದಿಂ ಜನನ ಸರ್ವಜ್ಞ
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ಲಿಂಗದೆ ಜಗವು ಅಡಗಿಹುದು - ಲಿಂಗವನು ಹಿಂಗಿ ಪರ ಉಂಟೆ ಸರ್ವಜ್ಞ
ಲಿಂಗದಾ ಗುಡಿ ಲೇಸು | ಗಂಗೆಯಾ ತಡಿ ಲೇಸು | ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ | ಸಂಗವೇ ಲೇಸು ಸರ್ವಜ್ಞ ||
ಲಿಂಗದಿಂ ಘನವಿಲ್ಲ | ಗಂಗೆಯಿಂ ಶುಚಿಯಿಲ್ಲ | ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ | ಜಂಗಮನಿಂದಿಲ್ಲ ಸರ್ವಜ್ಞ ||
ಲಿಂಗಯಲ್ಲಿ | ಸಂಗಿಸಿ ಚರಿಸಲು ಜಂಘೆಯಲಿ ನಡವ ಸರ್ವ ಜೀವಂಗಳು ಲಿಂಗದಿಂ ಜನನ ಸರ್ವಜ್ಞ
ಲಿಂಗವ ಪೂಝಿಸುವಾತ | ಜಂಗಮಕೆ ನೀಡದೊಡೆ ಲಿಂಗದ ಕ್ಷೋಭ ಘನವಕ್ಕು - ಮಹಲಿಂಗ ಹಿಂಗುವುದು ಅವನ ಸರ್ವಜ್ಞ
ಲೀಲೆಯಿಂ ಕಣ್ಣಿಲ್ಲ | ಗಾಲಿಯಿಂ ಬಟುವಿಲ್ಲ | ವಾಲಿಯಿಂದಧಿಕ ಬಲರಿಲ್ಲ ಪರದೈವ | ಶೂಲಿಯಿಂದಿಲ್ಲ ಸರ್ವಜ್ಞ ||
ಲೆಕ್ಕಕ್ಕೆ ಕಕ್ಕಿಲ್ಲ | ಬೆಕ್ಕಿಗಂ ವ್ರತವಿಲ್ಲ | ಸಿಕ್ಕು ಬಂಧನದಿ ಸುಖವಿಲ್ಲ ನಾರಿಗಂ | ಸಿಕ್ಕದವರಿಲ್ಲ ಸರ್ವಜ್ಞ ||