ಒಟ್ಟು 145 ಕಡೆಗಳಲ್ಲಿ , 1 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಸಿಯ ಪೇಳ್ವುದರಿಂದ | ಹಸಿದು ಸಾವುದು ಲೇಸು | ಹುಸಿದು ಮೆರೆಯುವನ ಬದುಕಿಂದ ಹಂದಿಯಾ | ಇಸಿಯು ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ
ಹುಸಿವನಿಂದೈನೂರು | ಪಶುವ ಕೊಂದವ ಲೇಸು | ಶಿಶು ವಧೆಯಮಾಡಿದವ ಲೇಸು ಮರೆಯಲಿ | ದ್ದೆಸೆದರೂ ಲೇಸು ಸರ್ವಜ್ಞ ||
--------------
ಸರ್ವಜ್ಞ
ಹೇಳಿದರೆ ಕೇಳಿದರೆ | ಕೇಳುವದು ಕರಲೇಸು | ಹೇಳಿದರೆ ಕೇಳಿದಿರುವವನ ಉಪ್ಪರಿಗೆ | ಕೇಳಗೂ ಕಷ್ಟ ಸರ್ವಜ್ಞ ||
--------------
ಸರ್ವಜ್ಞ