ಒಟ್ಟು 93 ಕಡೆಗಳಲ್ಲಿ , 1 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತರೊಡಗೂಡುವದು | ಭಕ್ತರೊಡನಾಡುವದು | ಭಕ್ತಿಯೊಳು ಬಿಡುವ ಬೆರೆದಿರ್ದ ಭಕ್ತತಾ | ಮುಕ್ತನಾಗಿಹನು ಸರ್ವಜ್ಞ ||
--------------
ಸರ್ವಜ್ಞ
ಭಿತ್ತಯಾ ಚಿತ್ರದಲಿ | ತತ್ವತಾ ನೆರೆದಿಹುದೆ | ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ | ತತ್ವ ತಾನೆಂದ ಸರ್ವಜ್ಞ ||
--------------
ಸರ್ವಜ್ಞ
ಮಡದಿ ಮಕ್ಕಳ ಮಮತೆ | ಒಡಲೊಡನೆ ಯಿರುವತನಕ | ಓದಲೊಡವೆ ಹೋದ ಮರುದಿನವೆ ಅವರೆಲ್ಲ | ಕಡೆಗೆ ಸಾರುವರು ಸರ್ವಜ್ಞ ||
--------------
ಸರ್ವಜ್ಞ
ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
--------------
ಸರ್ವಜ್ಞ
ಮನದಲ್ಲಿ ನೆನವಿಠಲಿ | ತನುವೊಂದು ಮಠವಕ್ಕು | ಮನಹೋಗಿ ಹಲವ ನೆನೆದಿಹರೆ ಅದು ಹಾಳು | ಮನೆಯೆಂದು ತಿಳಿಯೋ ಸರ್ವಜ್ಞ ||
--------------
ಸರ್ವಜ್ಞ
ಮನವು ಮುಟ್ಟಲು ಗಂಡು | ತನವು ಸೋಂಕಲು ಪಾಪ ಮನವೇಕದಿಂದ ಗುರುಚರಣ - ಸೋಂಕಿದೊಡೆ ತನು ಶುದ್ದವಯ್ಯ ಸರ್ವಜ್ಞ
--------------
ಸರ್ವಜ್ಞ
ಮನವೆಂಬ ಮರ್ಕಟವು | ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು | ಕರುಣೆ ನೀ ತನುಮನ ಕಾಯೋ ಸರ್ವಜ್ನ್ಯ ||
--------------
ಸರ್ವಜ್ಞ
ಮಾತನರಿದಾ ಸುತನು | ರೀತಿಯರಿದಾ ಸತಿಯು | ನೀತಿಯನು ಅರಿತ ವಿಪ್ರತಾ ಜಗದೊಳಗೆ | ಜ್ಯೋತಿಯಿದ್ದಂತೆ ಸರ್ವಜ್ಞ ||
--------------
ಸರ್ವಜ್ಞ
ಮಾತಿಂಗೆ ಮಾತುಗಳು | ಓತು ಸಾಸಿರವುಂಟು | ಮಾತಾಡಿದಂತೆ ನಡೆದರಾ ಕೈಲಾಸ | ಕಾತನೇ ಒಡೆಯ ಸರ್ವಜ್ಞ ||
--------------
ಸರ್ವಜ್ಞ
ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ | ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ | ಜಾತನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮಾದಿಗನು ಕೆಮ್ಮಯನ | ಭೇದವೆರಡೊಂದಯ್ಯ | ಮಾದಿಗನು ಒಮ್ಮೆ ಉಪಕಾರಿ ಕಮ್ಮೆ ತನ | ಗಾದವರ ಕೊಲುವ ಸರ್ವಜ್ಞ ||
--------------
ಸರ್ವಜ್ಞ
ಮೀರಿ ಬೆಳೆಯಲ್ಕೆನಗೆ | ಅರಿ ಬಣ್ಣವನುಡಿಸಿ ಮೂರು ರುಚಿದೋಳು ಶಿವ - ತನ್ನನು ತೋರದೇ ಹೋದ ಸರ್ವಜ್ಞ
--------------
ಸರ್ವಜ್ಞ
ಮುತ್ತು ಮುದುಕಿಗೆ ಏಕೆ | ತೊತ್ತೇಕೆ ಗುರುಗಳಿಗೆ | ಬತ್ತಿದಾ ಕೆರೆಗೆ ಮಿಗವೇಕೆ ಸವಣರಿಗೆ | ಮಿಥ್ಯತನವೇಕೆ ಸರ್ವಜ್ಞ ||
--------------
ಸರ್ವಜ್ಞ
ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ
--------------
ಸರ್ವಜ್ಞ
ಯಾತರ ಹೂವಾದರು | ನಾತರೆ ಸಾಲದೆ ಜಾತಿ- ವಿಜಾತಿಯೆನಬೇಡ - ಶಿವನೊಲಿ ದಾತನೇ ಜಾತಿ ಸರ್ವಜ್ಞ
--------------
ಸರ್ವಜ್ಞ