ಒಟ್ಟು 2705 ಕಡೆಗಳಲ್ಲಿ , 1 ವಚನಕಾರರು , 777 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಭಾಷೆಯಿಂ ಮೇಲಿಲ್ಲ | ದಾಸನಿಂ ಕೀಳಿಲ್ಲಿ | ಮೋಸದಿಂದಧಿಕ ಕೇಡಿಲ್ಲ ಪರದೈವ | ಈಶನಿಂದಿಲ್ಲ ಸರ್ವಜ್ಞ ||
ಭಿತ್ತಯಾ ಚಿತ್ರದಲಿ | ತತ್ವತಾ ನೆರೆದಿಹುದೆ | ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ | ತತ್ವ ತಾನೆಂದ ಸರ್ವಜ್ಞ ||
ಭೂತೇಶಗೆರಗುವನು | ಜಾತಿ ಮಾದಿಗನಲ್ಲ | ಜಾತಿಯಲಿ ಹುಟ್ಟಿ ಶಿವನಿಂಗೆ ಶರಣೆನ್ನ | ದಾತ ಮಾದಿಗರು ಸರ್ವಜ್ಞ ||
ಭೊತೇಶ ಶರಣೆಂಬ | ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಭೊತೇಶ - ಶರಣೆನ್ನ ದಾತ ಮಾದಿಗನು ಸರ್ವಜ್ಞ
ಮಕರಕ್ಕೆ ಗುರು ಬರಲು | ಮಕರ ತೋರಣವಕ್ಕು ಸಕಲ ಧಾನ್ಯ ಬೆಳೆಯಕ್ಕು ಪ್ರಜೆಗಳು ಸುಖವಿರಲು ಅಕ್ಕು ಸರ್ವಜ್ಞ ||
ಮಕ್ಕಳಿಲ್ಲವು ಎಂದು | ಅಕ್ಕಮಲ್ಲಮ್ಮನು ದುಕ್ಕದಿ ಬಸವ | ಗರಿಪಲ್ಲವ | - ಕಾಶಿಯ ಮುಕ್ಕಣ್ಣಗೆ ಹೋದ ಸರ್ವಜ್ಞ
ಮಗಳ ಮಕ್ಕಳು ಹೊಲ್ಲ | ಹಗೆಯವರಗೆಣೆ ಹೊಲ್ಲ | ಜಗಳಾಡುವಳ ನೆರೆ ಹೊಲ್ಲ ಮೂಗಿಂಗೆ | ನೆಗಡಿಯೇ ಹೊಲ್ಲ ಸರ್ವಜ್ಞ ||
ಮಗಳಕ್ಕ ತಂಗಿಯು | ಮಿಗೆ ಸೊಸೆಯು ನಾದಿನಿಯು | ಜಗದ ವನಿತೆಯರು ಜನನಿಯೂ ಇವರೊಳಗೆ | ಜಗಕೊಬ್ಬಳೆಸೈ ಸರ್ವಜ್ಞ ||
ಮಗಳಕ್ಕ ತಂಗಿಯು | ಮಿಗೆ ಸೊಸೊಯು ನಾದಿನಿಯು ಜಗದ ವನಿತೆಯರು ಜನನಿ ಮಂತಾದವರು ಜಗಕೊಬ್ಬಳೈಸೆ ಸರ್ವಜ್ಞ
ಮಗ್ಗಿಯಾ ಗುಣಿಸುವಾ | ಮೊಗ್ಗರದ ಜೋಯಿಸರು | ಅಗ್ಗವನು ಮಳೆಯನರಿಯದಲೆ ನುಡಿವವರ | ಹೆಗ್ಗಡೆಯಬಲ್ಲ ಸರ್ವಜ್ಞ ||
ಮಂಜಿನಿಂ ಮಳೆ ಲೇಸು | ಪಂಜು ಇರುಳಲಿ ಲೇಸು | ಪಂಜರವು ಲೇಸು ಅರಗಿಳಿಗೆ ಜಾಡಂಗೆ | ಗಂಜಿ ಲೇಸೆಂದ ಸರ್ವಜ್ಞ ||
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು | ಕಜ್ಜಾಯ ತುಪ್ಪ ಉಣ ಲೇಸು | ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ ||
ಮಠಪತಿಗೆ ಕೊರಗಿಲ್ಲ | ಕಟುಕಂಗೆ ಮರುಗಿಲ್ಲ | ಪಟವೆಂಬುದಕ್ಕೆ ನೆರಳಿಲ್ಲ ಹಟಗಾರ | ಕಟಿಲನೆಂದರಿಗು ಸರ್ವಜ್ಞ ||
ಮಡದಿ ಮಕ್ಕಳ ಮಮತೆ | ಒಡಲೊಡನೆ ಯಿರುವತನಕ | ಓದಲೊಡವೆ ಹೋದ ಮರುದಿನವೆ ಅವರೆಲ್ಲ | ಕಡೆಗೆ ಸಾರುವರು ಸರ್ವಜ್ಞ ||
ಮಡಿಯನುಟ್ಟವರನ್ನು | ನುಡಿಸುವರು ವಿನಯದಲಿ | ಒಡಹುಟ್ಟಿದವರು ಅರುವೆಯನು ಉಟ್ಟಿಹರೆ | ನುಡಿಸ ನಾಚುವರು ಸರ್ವಜ್ಞ ||