ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬಿಲ್ಲನೇರಲು ಗುರುವು | ತಲ್ಲಣವು ಜಗಕೆಲ್ಲ | ಕಲ್ಲು ಮೇಲೆಲ್ಲ ಮಳೆಯಕ್ಕು ನೃಪರಿಗೆ | ತಲ್ಲಣವೇ ಅಕ್ಕು ಸರ್ವಜ್ಞ ||
ಬುದ್ಧಿವಂತರ ಕೂಟ| ವೆದ್ದು ಗಾರುವ ಹದ್ದು | ಬುದ್ಧಿಯಿಲ್ಲದವರ ನೆರೆ ಕೂಟ ಕೊರಳೊಳಗೆ | ಗುದ್ದಿಯಿದ್ದಂತೆ ಸರ್ವಜ್ಞ ||
ಬೂದಿಯೊಳು ಹುದುಗಿಸುತ | ವೇಧಿಸುತ ಮರೆಮಾಡಿ | ಕಾದಿರ್ದ ಚಿನ್ನದೊಳು ಬೆರಸಿ ಒರೆಹಚ್ಚಿ | ಊದುತಲಿ ಟೊಣೆವ ಸರ್ವಜ್ಞ ||
ಬೆಂಕಿಯಲಿ ದಯೆಯಿಲ್ಲ | ಮಂಕನಲಿ ಮತಿಯಿಲ್ಲ | ಶಂಖಧ್ವನಿಗೆ ಪ್ರತಿಯಿಲ್ಲ ಸ್ವರ್ಗದಿ | ಸುಂಕದೇ ಇಲ್ಲ ಸರ್ವಜ್ಞ ||
ಬೆಕ್ಕು ಮನೆಯೊಳು ಲೇಸು | ಮುಕ್ಕು ಕಲ್ಲಿಗೆ ಲೇಸು | ನಕ್ಕು ನಗಿಸುವಾ ನುಡಿಲೇಸು ಊರಿಂಗೆ | ಒಕ್ಕಲಿಗ ಲೇಸು ಸರ್ವಜ್ಞ ||
ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ ನೆಟ್ಟನೆ ಗುರುವನರಿದನ - ಕರ್ಮವು ಮುಟ್ಟಲಂಜುವವು ಸರ್ವಜ್ಞ
ಬೆಟ್ಟವನು ಕೊಂಡೊಂಬ್ಬ | ನಿಟ್ಟಿಹನು ಎಂದಿಹರೆ ಇಟ್ಟಿಹನು ಎಂದು ಎನಬೇಕು ಮೂರ್ಖನಾ | ಬಟ್ಟೆ ಬೇಡೆಂದ ಸರ್ವಜ್ಞ ||
ಬೆಂಡಿರದೆ ಮುಳುಗಿದರೂ | ಗುಂಡೆದ್ದು ತೇಲಿದರೂ | ಬಂಡಿಯ ನೊಗವು ಚಿಗಿತರೂ ಸಾಲಿಗನು | ಕೊಂಡದ್ದು ಕೊಡನು ಸರ್ವಜ್ಞ ||
ಬೆಂದ ಆವಿಗೆ ಭಾಂಡ | ಒಂದೊಂದು ಭೋಗವನು | ಅಂದದಿಂ ಉಂಡ ಒಡೆದು ಹಂಚಾದಂತೆ | ಬಿಂದುವನು ದೇಹ ಸರ್ವಜ್ಞ ||
ಬೆಂದಾವಿಗೆಯ ಭಾಂಡ | ಒಂದೊಂದು ಭೋಗವನು ಅಂದಂದಿಗುಂಡು ಒಡೆದು ಹಂಚಾದಂತೆ ಬಿಂದುವಿನ ದೇಹ ಸರ್ವಜ್ಞ
ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ ತಿಳಿದವರರೆಗು ಸರ್ವಜ್ಞ
ಬೇಗೆಯೊಳು ಹೋಗದಿರು | ಮೂಕರೊಳು ನುಡಿಯದಿರು | ಆಗದರ ನಂಬಿ ಕೆಡದೆ ಇರು ನಡುವಿರಳು | ಹೋಗದಿರು ಪಯಣ ಸರ್ವಜ್ಞ ||
ಬೇಡ ಕಾಯದೇ ಕೆಟ್ಟ | ಜೇಡಿ ನೇಯದೆ ಕೆಟ್ಟ | ನೋಡದಲೆ ಕೆಟ್ಟ ಕೃಷಿಕ ತಾ | ಸತಿಯ ಬಿಟ್ಟಾಡಿದವ ಕೆಟ್ಟ ಸರ್ವಜ್ಞ ||
ಬೇಡಗಡವಿಯ ಚಿಂತೆ | ಆಡಿಂಗೆ ಮಳೆ ಚಿಂತೆ | ನೋಡುವಾ ಚಿಂತೆ ಕಂಗಳಿಗೆ ಹೆಳವಂಗೆ | ದ್ದಾಡುವ ಚಿಂತೆ ಸರ್ವಜ್ಞ ||
ಬೇಡಂಗೆ ಕೊಡೆ ಹೊಲ್ಲ | ಆಡಿಂಗಮಳೆಹೊಲ್ಲ | ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ | ಕಾಡುನುಡಿ ಹೊಲ್ಲ ಸರ್ವಜ್ಞ ||