ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬಡವನಿದ್ದುದನಾಡೆ | ಕಡೆಗೆ ಪೋಗೆಂಬುವರು | ಒಡವೆಯುಳ್ಳವರು ಸುಡುಗಾಡೆ ನಂಡಿದರೂ | ಪೊಡವಿಯೊಳಗಧಿಕ ಸರ್ವಜ್ಞ ||
ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು | ಕೊಡೆಯನೆಳಲಾತ ನುಡಿದಿಹರೆ ನಾಯಕನ | ನುಡಿಯಂಬರೆಲ್ಲ ಸರ್ವಜ್ಞ ||
ಬಡವನೊಳ್ಳೆಯ ಮಾತು | ನುಡಿದರಲ್ಲೆಂಬುವರು | ಪೊಡವೀಶ ಜಳ್ಳ - ಜೊಲ್ಲೊಡನೆ ನುಡಿದರೂ | ಕಡುಮೆಚ್ಚುತಿಹರು ಸರ್ವಜ್ಞ ||
ಬಂಡುಣಿಗಳಂತಿಹರು | ಭಂಡನೆರೆ ಯಾಡುವರು ಕಂಡುದನು ಅರಿದು ನುಡಿಯರಾ ಹಾರುವರು | ಭಂಡರೆಂದರಿಗು ಸರ್ವಜ್ಞ ||
ಬಂದಿಹೆನು ನಾನೊಮ್ಮೆ | ಬಂದು ಹೋಗುವೆನೊಮ್ಮೆ ಬಂದೊಮ್ಮೆ ಹೋಗೆ ಬಾರೆ ನಾಂ ಕವಿಗಳಲಿ | ವಂದ್ಯರಿಗೆ ಪೇಳಿ ಸರ್ವಜ್ಞ ||
ಬಂಧನದಲಿರುವನು | ಹಂದಿಯಂತಿಹನು ಬಂಧವಿಲ್ಲದವನು ಬಡವನು ದೇಶಿಗನು | ಎಂದಳಿದರೇನು ಸರ್ವಜ್ಞ ||
ಬರಕೆ ಬುತ್ತಿಯು ಹೊಲ್ಲ | ಸಿರಿಕಾ ಮನೆ ಹೊಲ್ಲ | ಕರೆಕರೆಯ ಕೂಳು ತಿನಹೊಲ್ಲ | ಕಜ್ಜಿಯನು ಕೆರೆಕೊಳ್ಳ ಹೊಲ್ಲ ಸರ್ವಜ್ಞ ||
ಬರೆವ ಕರಣೀಕನೊಡನೆ | ಹಿರಿದು ಜಗಳವು ಬೇಡ | ಗರಗಸದ ಒಡನೆ ಮರನಾಡಿ ತನ್ನತಾ | ನಿರಿದುಕೊಂಡಂತೆ ಸರ್ವಜ್ಞ ||
ಬಲವಂತ ನಾನೆಂದು | ಬಲುದು ಹೋರಲು ಬೇಡ | ಬಲವಂತ ವಾಲಿ ಶ್ರೀರಾಮನೊಡನಾಡಿ | ಛಲದಿಂದ ಕೆಟ್ಟ ಸರ್ವಜ್ಞ ||
ಬಲವಂತರಾದವರು | ಕಲಹದಿಂ ಕೆಟ್ಟಿಹರು | ಬಲವಂತ ಬಲಿಯು ದುರ್ಯೋಧನಾದಿಗಳು | ಛಲದಲುಳಿದಿಹರೆ ಸರ್ವಜ್ಞ ||
ಬಲ್ಲಿದನು ನುಡಿದಿಹರೆ | ಬೆಲ್ಲವನು ಮೆದ್ದಂತೆ | ಇಲ್ಲದಾ ಬಡವ ನುಡಿದಿಹರೆ - ಬಾಯಿಂದ | ಜೊಲ್ಲು ಬಿದ್ದಂತೆ ಸರ್ವಜ್ಞ ||
ಬಾಲ್ಯ - ಯೌವನ ಪ್ರೌಢ | ಲೋಲ ಹಲವಾದ ತನು ಏಳುತ್ತ ಮಡುವುತಿರ ಬೇಡ - ಅನುದಿನವು ಶೊಲಿಯ ನೆನೆಯ ಸರ್ವಜ್ಞ
ಬಾಲ್ಯಯೌವನದೊಳಗೆ | ಲೋಲುಪ್ತನಾಗಿ ನೀ | ನೇಳುತುಲಿ ಮದಿಸುತ್ತಿರಬೇಡ ಅನುದಿನವು | ಸೂಲಿಯನು ನೆನೆಯೋ ಸರ್ವಜ್ಞ ||
ಬಿತ್ತದಾ ಹೊಲ ಹೊಲ್ಲ | ಮೆತ್ತದಾ ಮನೆ ಹೊಲ್ಲ | ಚಿತ್ತ ಬಂದತ್ತತಿರುಗುವಾ ಮಗ ಹೊಲ್ಲ | ಬತ್ತಲಿರ ಹೊಲ್ಲ ಸರ್ವಜ್ಞ ||
ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ