ಒಟ್ಟು 71 ಕಡೆಗಳಲ್ಲಿ , 1 ವಚನಕಾರರು , 61 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಂಡಿರದೆ ಮುಳುಗಿದರೂ | ಗುಂಡೆದ್ದು ತೇಲಿದರೂ | ಬಂಡಿಯ ನೊಗವು ಚಿಗಿತರೂ ಸಾಲಿಗನು | ಕೊಂಡದ್ದು ಕೊಡನು ಸರ್ವಜ್ಞ ||
--------------
ಸರ್ವಜ್ಞ
ಬೇಡಂಗೆ ಶುಚಿಯಿಲ್ಲ | ಬೋಡಂಗೆ ರುಚಿಯಿಲ್ಲ | ಕೂಡಿಲ್ಲದಂಗೆ ಸುತರಿಲ್ಲ ಜಾಡತಾ | ಮೂಢಾತ್ಮನಲ್ಲ ಸರ್ವಜ್ಞ ||
--------------
ಸರ್ವಜ್ಞ
ಭಕ್ತರೊಡಗೂಡುವದು | ಭಕ್ತರೊಡನಾಡುವದು | ಭಕ್ತಿಯೊಳು ಬಿಡುವ ಬೆರೆದಿರ್ದ ಭಕ್ತತಾ | ಮುಕ್ತನಾಗಿಹನು ಸರ್ವಜ್ಞ ||
--------------
ಸರ್ವಜ್ಞ
ಮನ ಭಂಗವಾದಂದು | ಘನನಿದ್ರೆ ಹೋದಂದು | ವನಿತೆಯರು ಸುತರು ಜರಿದಂದು ಮರಣವೇ | ತನಗೆ ಬಂತೆಂದ ಸರ್ವಜ್ಞ ||
--------------
ಸರ್ವಜ್ಞ
ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ | ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ | ಜಾತನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮೇರುವಿಂಗೆಣೆಯಿಲ್ಲ | ಧಾರುಣಿಕೆ ಸರಿಯಿಲ್ಲ | ತಾರಕೆನಿಗಿಂತ ಹಿತರಿಲ್ಲ ದೈವತಾ | ಬೇರೊಬ್ಬನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಯತಿಗಳಿಗೆ ಮತೆಗೆಡಗು | ಸತಿಯ ಸಜ್ಜನ ಕೆಡಗು | ಮತಿವಂತರೆಲ್ಲ ಭ್ರಮೆಗೊಳಗು ಹೊನ್ನ ಶ್ರುತಿಯ ಕೇಳಿದರೆ ಸರ್ವಜ್ಞ ||
--------------
ಸರ್ವಜ್ಞ
ಯತಿಯ ತಪಗಳು ಕೆಡುಗು | ಪತಿಯ ಪ್ರೇಮವು ಕೆಡುಗು | ಸ್ಥಿತಿವಂತರು ಮತಿ ಕೆಡಗು | ರತಿದೇವಿ ಶ್ರುತಿಯ ಕೇಳಿದರೆ ಸರ್ವಜ್ಞ ||
--------------
ಸರ್ವಜ್ಞ
ಯಾತರ ಹೂವಾದರು | ನಾತರೆ ಸಾಲದೆ ಜಾತಿ- ವಿಜಾತಿಯೆನಬೇಡ - ಶಿವನೊಲಿ ದಾತನೇ ಜಾತಿ ಸರ್ವಜ್ಞ
--------------
ಸರ್ವಜ್ಞ
ಯಾತರದು ಹೂವೇನು | ನಾತರದು ಸಾಲದೇ | ಜಾತಿ ವಿಜಾತಿಯೆನ್ನಬೇಡ | ದೇವನೊಲಿ ದಾತನೇ ಸರ್ವಜ್ಞ ||
--------------
ಸರ್ವಜ್ಞ
ಲಿಂಗದಾ ಗುಡಿ ಲೇಸು | ಗಂಗೆಯಾ ತಡಿ ಲೇಸು | ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ | ಸಂಗವೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಲಿಂಗದಿಂ ಘನವಿಲ್ಲ | ಗಂಗೆಯಿಂ ಶುಚಿಯಿಲ್ಲ | ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ | ಜಂಗಮನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ವೀರತನ ವಿತರಣವ | ಸಾಗದ ಚಪಲತೆಯು | ಚಾರುತರ ರೂಪ ಚದುರತನವೆಲ್ಲರಿಗೆ | ಹೋರಿದರೆ ಬಹುವೆ ಸರ್ವಜ್ಞ ||
--------------
ಸರ್ವಜ್ಞ
ವೀಳ್ಯವಿಲ್ಲದ ಬಾಯಿ | ಕೂಳು ಇಲ್ಲದ ನಾಯಿ | ಬಾಳೆಗಳು ಇಲ್ಲದೆಲೆದೋಟ ಪಾತರದ | ಮೇಳ ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಶೇಷನಿಂ ಬಲರಿಲ್ಲ | ಮೋಸದಿಂ ಕಳರೆಲ್ಲ ನೇಸರೆಂ ಜಗಕೆ ಹಿತರಿಲ್ಲ - ದೇವ ತಾ ಈಶನಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ