ಒಟ್ಟು 106 ಕಡೆಗಳಲ್ಲಿ , 1 ವಚನಕಾರರು , 91 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸನದ ಲುಂಬುವದು | ಸೂಸುವದು ಬಾಯಲ್ಲಿ | ಬೇಸರದ ಹೊತ್ತು ಕೊಲುವದು ಕವಿಗಳೊಳು | ಸಾಸಿಗರು ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಆಸನದಲುಂಬುವದು | ಸೂಸುವದು ಬಾಯಲ್ಲಿ | ಬೇಸರದ ಹೊತ್ತು ಕೊಲುವದು ಕವಿಗಳೊಳು | ಸಾಸಿಗರು ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಆಸನವು ದೃಢವಾಗಿ | ನಾಶಿಕಾಗ್ರದಿ ದಿಟ್ಟು | ಸೂಸವ ಮನವ ಫನದಲಿರಿಸಿದನು ಜಗ | ದೀಶ ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಹಾರವುಳ್ಳಲ್ಲಿ ಬೇಹಾರ ಫನವಕ್ಕು | ಆಹಾರದೊಳಗ ನರಿಧಿಪ್ಪ ಸೆಟ್ಟಿಗೇ | ಬೇಹಾರದಕ್ಕು ಸರ್ವಜ್ಞ ||
--------------
ಸರ್ವಜ್ಞ
ಆಳಾಗಬಲ್ಲವನು | ಆಳುವನು ಅರಸಾಗಿ | ಆಳಾಗಿ ಬಾಳಲರೆಯದವ ಕಡೆಯಲ್ಲಿ | ಹಾಳಾಗಿ ಹೋದ ಸರ್ವಜ್ಞ ||
--------------
ಸರ್ವಜ್ಞ
ಆಳು ಇದ್ದರೆ ಅರಸು | ಕೂಳು ಇದ್ದರೆ ಬಿರುಸು | ಆಳುಕೂಳುಗಳು ಮೇಳವಿಲ್ಲದ ಮನೆಯ | ಬಾಳುಗೇಡೆಂದ ಸರ್ವಜ್ಞ ||
--------------
ಸರ್ವಜ್ಞ
ಆಳು ಸೂಳೆಯು ನಾಯಿ | ಕೋಳಿ ಜೋಯಿಸ ವೈದ್ಯ | ಗೂಳಿಯು ತಗರು ಪ್ರತಿರೂಪ ಕಂಡಲ್ಲಿ | ಕಾಳಗವು ಎಂದ ಸರ್ವಜ್ಞ ||
--------------
ಸರ್ವಜ್ಞ
ಈಶ ಭಕ್ತನು ಆಗಿ | ವೇಶಿಯನು ತಾ ಹೋಗೆ | ಸಲಾಗಿರ್ದ ಭೋನವನು ಹಂದಿ ತಾ ಮೂಸಿ ಹೋದಂತೆ ಸರ್ವಜ್ಞ ||
--------------
ಸರ್ವಜ್ಞ
ಊರಿಗೆ ದಾರಿಯ | ನಾರು ತೋರಿದರೇನು ಸಾರಾಯಮಪ್ಪ ಮತವನರಿಹಿಸುವ ಗುರು ಆರಾದೊಡೇನು ಸರ್ವಜ್ಞ
--------------
ಸರ್ವಜ್ಞ
ಎಂತು ಪ್ರಾಣಿ ಕೊಲ್ಲ | ದಂತುಂಟು ಜಿನಧರ್ಮ | ಜಂತು ಬಸುರಲ್ಲಿ ಸಾಯಲು ಆ ಜೀವಿಯು | ಎಂತಾದ ಶ್ರವಣ ಸರ್ವಜ್ಞ ||
--------------
ಸರ್ವಜ್ಞ
ಒಮ್ಮೆ ಸೀತರೆ ಹೊಲ್ಲ | ಇಮ್ಮೆ ಸೀತರೆ ಲೇಸು ಕೆಮ್ಮಿಕೇಕರಿಸಿ ಉಗುಳುವಾ ಲೇಸು | ಆ ಬೊಮ್ಮಗು ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಓಂಕಾರ ತಾನಲ್ಲ | ಹ್ರಾಂಕಾರ ಮುನ್ನಲ್ಲ ಆಂಕಾಶತಳವ ಮೀರೆಹುದು - ಹರಿಯಜರು ತಾಂ ಕಾಣರಯ್ಯ ಸರ್ವಜ್ಞ
--------------
ಸರ್ವಜ್ಞ
ಓಂಕಾರ ಮುಖವಲ್ಲ | ಆಕಾರವದಕಿಲ್ಲ | ಆಕಾಶದಂತೆ ಅಡಗಿಹುದು ಪರಬೊಮ್ಮ | ವೇಕಾಣದಯ್ಯ ಸರ್ವಜ್ಞ ||
--------------
ಸರ್ವಜ್ಞ
ಕಚ್ಚಿದರೆ ಕಚ್ಚುವದು | ಕಿಚ್ಚಲ್ಲ ಕೊಳ್ಳೆಯಲ್ಲ | ಆಶ್ಚರ್ಯವಲ್ಲ ಅರಿದಲ್ಲವೀ ಮಾತು | ನಿಶ್ಚರ್ಯವಲ್ಲ ಸರ್ವಜ್ಞ ||
--------------
ಸರ್ವಜ್ಞ
ಕಚ್ಚಿದರೆ ಕಚ್ಚುವದು | ಕಿಚ್ಚಲ್ಲ ಚೇಳಲ್ಲ | ಆಶ್ಚರ್ಯವಲ್ಲ ಅರಿದಲ್ಲ ಈ ಮಾತು | ನಿಚ್ಚಯಂ ಬಲ್ಲೆ ಸರ್ವಜ್ಞ ||
--------------
ಸರ್ವಜ್ಞ