ಒಟ್ಟು 1034 ಕಡೆಗಳಲ್ಲಿ , 1 ವಚನಕಾರರು , 553 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಾದಿಗನು ಕೆಮ್ಮಯನ | ಭೇದವೆರಡೊಂದಯ್ಯ | ಮಾದಿಗನು ಒಮ್ಮೆ ಉಪಕಾರಿ ಕಮ್ಮೆ ತನ | ಗಾದವರ ಕೊಲುವ ಸರ್ವಜ್ಞ ||
ಮಾಯಮೋಹವ ನಚ್ಚಿ | ಕಾಯವನು ಕರಗಿಸಿತೆ ಆಯಾಸಗೊಳುತ ಇರಬೇಡ - ಓಂ ನಮಶ್ಯಿ ವಾಯಯೆಂದನ್ನಿ ಸರ್ವಜ್ಞ
ಮಾಯಾಮೋಹನ ಮೆಚ್ಚಿ | ಕಾಯವನು ಕರಗಿಸಿತ | ಆಯಾಸಗೊಂಡ ಬಳಲದೊನ್ನಮಃ ಶಿ | ವಾಯವೆಂದೆನ್ನು ಸರ್ವಜ್ಞ ||
ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ
ಮಾಸಿನೊಳು ಮುಸುಕಿರ್ದು | ಮೂಸಿ ಬರುತಾಸನವ ಹೇಸಿಕೆಯ ಮಲವು ಸೂಸುವುದ - ಕಂಡು ಕಂ ಡಾಸೆ ಬಿಡದು ಸರ್ವಜ್ಞ
ಮಾಳಗೆಯ ಮನೆ ಲೇಸು | ಗೂಳಿಯಾ ಪಶುಲೇಸು | ಈಳೆಯಾ ಹಿತ್ತಲಿರಲೇಸು | ಪತಿವ್ರತೆಯ ಬಾಳು ಲೇಸೆಂದ ಸರ್ವಜ್ಞ ||
ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ ಕೇಳೆ ನೀನಾರ ಮಗನೆಂದು - ನಾ ಶಿವನ ಮೇಳದಣುಗೆಂಬೆ ಸರ್ವಜ್ಞ
ಮಿಥುನಕ್ಕೆ ಗುರು ಬರಲು | ಮಥನಲೋಕದೊಳಕ್ಕು | ಪೃಥ್ವಿಯೊಳಗೆಲ್ಲ ರುಜವಕ್ಕು ನರಪಶು | ಹಿತವಾಗಲಕ್ಕೂ ಸರ್ವಜ್ಞ ||
ಮೀನಕ್ಕೆ ಗುರು ಬರಲು | ಮಾನಖಂಡಗವಕ್ಕು ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ | ಆನಂದವಕ್ಕು ಸರ್ವಜ್ಞ ||
ಮೀನಕ್ಕೆ ಶನಿ ಬರಲು | ಶಾನೆ ಕಾಳಗವಕ್ಕು | ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ | ಹಾನಿಯೇ ಬಕ್ಕು ಸರ್ವಜ್ಞ ||
ಮೀರಿ ಬೆಳೆಯಲ್ಕೆನಗೆ | ಅರಿ ಬಣ್ಣವನುಡಿಸಿ ಮೂರು ರುಚಿದೋಳು ಶಿವ - ತನ್ನನು ತೋರದೇ ಹೋದ ಸರ್ವಜ್ಞ
ಮುಗೈಯ ಲಾಡುವದು | ಹಿಂಗುವದು ಹೊಂಗುವದು ಸಿಂಗಿಯಲಿ ಸೀಳಿ ಬಿಡುತಿಹುದು ಆ ಮಿಗದ ಸಂಗವನು ನೋಡು ಸರ್ವಜ್ಞ ||
ಮುಟ್ಟಾದ ಹೊಲೆಯೊಳಗೆ | ಹುಟ್ಟುವುದು ಜಗವೆಲ್ಲ | ಮುಟ್ಟಬೇಡೆಂದ ತೊಲಗುವಾ ಹಾರುವನು | ಹುಟ್ಟಿರುವನೆಲ್ಲಿ ಸರ್ವಜ್ಞ ||
ಮುಟ್ಟಿದಂತಿರಬೇಕು | ಮುಟ್ಟದಲೆ ಇರಬೇಕು | ಮುಟ್ಟಿಯೂ ಮುಟ್ಟಿದಿರಬೇಕು ಪರಸ್ತ್ರೀಯ | ಮುಟ್ಟಿದವ ಕೆಟ್ಟ ಸರ್ವಜ್ಞ ||
ಮುಟ್ಟಿದೆಡರಿಗೆ ಅಭಯ | ಕೊಟ್ಟಾತ ದಾತಾರ | ಕೆಟ್ಟ ಕಾರ್ಯವನು ತಿದ್ದಿದರೆ ಅವನೊಂದು | ನೆಟ್ಟನೆಯ ದೈವ ಸರ್ವಜ್ಞ ||