ಒಟ್ಟು 1514 ಕಡೆಗಳಲ್ಲಿ , 1 ವಚನಕಾರರು , 602 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಸ್ತ್ರೀಯ ಗಮನದಿಂ | ಪರಲೋಕವದು ಹಾನಿ | ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ | ನರಲೋಕದಲ್ಲಿ ಸರ್ವಜ್ಞ ||
ಪರುಷ ಕಬ್ಬುನದೆಸೆವ | ಕರಡಿಗೆಯೊಳಡರುವದೆ | ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು | ಎರಕವಾಗಿಹನೆ ಸರ್ವಜ್ಞ ||
ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ ಪರಷವೆಂತಂತೆ ಶಿಷ್ಯಂಗೆ - ಗುರುವಿನ ಸ್ಪರುಶನವೆ ಮೋಕ್ಷ ಸರ್ವಜ್ಞ
ಪಲ್ಲಕ್ಕಿ ಏರಿದವ | ರೆಲ್ಲಿಂದ ಬಂದಿಹರು | ನೆಲ್ಲಕ್ಕಿಯಂತೆ ಸುಲಿವಲ್ಲ ಹಿರಿಯರುಂ | ನೆಲ್ಲಳಿಂದಲೇ ಸರ್ವಜ್ಞ ||
ಪವನಪರಿಯರಿದಂಗೆ | ಶಿವನ ಸಾಧಿಸಲಕ್ಕು | ಭವಮಾಲೆ ಹರಿದು ಸುಖಿಸುವೊಡೆ ಅವ ಸದಾಶಿವನು ತಾನಕ್ಕು ಸರ್ವಜ್ಞ ||
ಪಾಪ - ಪುಣ್ಯಗಳೆಂಬ | ತಿಣ್ಣ ಭೇದಗಳಿಂದ | ತಣ್ಣಗೀ ಜಗವು ನಡೆದಿಹುದು ಅಲ್ಲದಡ | ನುಣ್ಣಗಾಗಿಹುದು ಸರ್ವಜ್ಞ ||
ಪಾಪವೆನ್ನದು ಕಾಯ | ಪುಣ್ಯ ನಿನ್ನದು ರಾಯ | ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ | ರೂಪುಗೊಳಿಸಯ್ಯ ಸರ್ವಜ್ನ್ಯ ||
ಪೀಠ ಮೂಢಗೆ ಹೊಲ್ಲ | ಕೀಟ ನಿದ್ದೆಗೆ ಹೊಲ್ಲ | ತೀಟಿಯದು ಹೊಲ್ಲ ಕಜ್ಜಿಯಾ ದುರ್ಜನರ | ಕಾಣವೇ ಹೊಲ್ಲ ಸರ್ವಜ್ಞ ||
ಪುಣ್ಯತನಗುಳ್ಳ ನರ | ಮನ್ನಣೆಯು ಪಿರಿದಕ್ಕು | ಹಣ್ಣಿರ್ದ ಕಾರ್ಯ - ಫಲವಕ್ಕು ಹಿಡಿದಿರ್ದ | ಮಣ್ಣು ಹೊನ್ನಕ್ಕು ಸರ್ವಜ್ಞ ||
ಪುರುಷ ಕಂಡರೆ ಕೊಲುವ | ಅರಸು ದಂಡವ ಕೊಂಬ | ನರರು ಸುರರೆಲ್ಲ ಮುನಿಯವರು ಅಂತ್ಯಕ್ಕೆ
ಪುಲ್ಲೆ ಚರ್ಮವನುಟ್ಟು | ಹುಲ್ಲು ಬೆಳ್ಳಗೆ ಬಿಟ್ಟು ಕಲ್ಲು ಮೇಲಿಪ್ಪ ತಪಸಿಯ ಮನವೆಲ್ಲ | ನಲ್ಲೆಯಲ್ಲಿಹುದು ಸರ್ವಜ್ಞ ||
ಪ್ರಸ್ತಕ್ಕಿಲ್ಲದ ಮಾತು | ಹತ್ತು ಸಾವಿರ ವ್ಯರ್ಥ | ಕತ್ತೆ ಕೂಗಿದರೆ ಫಲವುಂಟು ಬರಿಮಾತು | ಕತ್ತೆಗಿಂ ಕಷ್ಟ ಸರ್ವಜ್ಞ ||
ಪ್ರಸ್ತಕ್ಕೆ ನುಡಿದಿಹರೆ | ಬೆಸ್ತಂತೆ ಇರಬೇಕು | ಪ್ರಸ್ತವನು ತಪ್ಪಿ ನುಡಿದಿಹರೆ | ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ ||
ಪ್ರಸ್ತಾಪಕೊದಗಿದಾ | ಕತ್ತೆ ಮದಕರಿಯಂತೆ | ಪ್ರಸ್ತಾಪತೀರ್ಥ ಮರುದಿನಾ ಮದಕರಿಯು | ಕತ್ತೆಯಂತಕ್ಕು ಸರ್ವಜ್ಞ ||
ಬಗೆಬಗೆಯ ಭೋಗವಿರೆ | ನಗುತಿಹರು ಸತಿ ಸುತರು | ನಗೆ ಹೋಗಿ ಹೋಗೆಯು ಬರಲವರು ಅಡವಿಯಲಿ | ಒಗೆದು ಬರುತಿಹರು ಸರ್ವಜ್ಞ ||