ಒಟ್ಟು 780 ಕಡೆಗಳಲ್ಲಿ , 1 ವಚನಕಾರರು , 772 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗುರಿಯ ತಾಗದ ಕೋಲ | ನೂರಾರುನೆಸೆದೇನು ? | ಬರಡಿಂಗ ಭಕ್ತಿ ಭಜಸಿದೊಡೆ ಅದು ತಾನು | ಇರಲರಿಯದಯ್ಯ ಸರ್ವಜ್ಞ ||
ಗುರುಗಳಿಗೆ ಹಿರಿಯರಿಗೆ | ಶಿರವಾಗಿ ಎಅರಗಿದರೆ \ ನರಸುರರು ಒಲಿದು ಸಿರಿ ಸುರಿಯೆ ಕೈಲಾಸ | ಕರತಲಾಮಲಕ ಸರ್ವಜ್ಞ ||
ಗುರುಪಾದಸೇವೆ ತಾ | ದೊರೆಕೊಂಡಿತಾದೊಡೆ ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ
ಗುರುವಿನ ಸೇವೆಯು | ದೊರಕೊಂಡಿತಾದೊಡೆ ಹರೆವುದು ಪಾಪವರಿದೆನಲು - ವಜ್ರಾಯುಧದಿ ಗಿರಿಯ ಹೊಯ್ದಂತೆ ಸರ್ವಜ್ಞ
ಗುರುವಿನಾ ಸೇವೆಯನು | ಹಿರಿದಾಗಿ ಮಾಡದಲೆ | ಹರಿದಾಡಿ ಮುಕ್ತಿ ಪಡೆಯುವಡೆ ಸ್ವರ್ಗ ತಾ | ಹಿರಿಯ ತವರಹುದೆ ಸರ್ವಜ್ನ್ಯ ||
ಗೊರವರ ಸೂಳೆಯೂ | ಹರದನೂ ಸಾನಿಯೂ | ತಿರಿವನು ವೈದ್ಯ-ದ್ವಿಜ-ಗಣಿಕೆ ಇನ್ನೊಬ್ಬ | ರಿರವ ಸೈರಿಸರು ಸರ್ವಜ್ಞ ||
ಚಂದ್ರ ಮಾರ್ತಾಂಡರನು | ಸಂಧಿಸಿಯೇ ಪರಿವೇಷ | ಕುಂದದಲೆ ನಿಚ್ಚ ಬರುತ್ತಿರಲು ಜಗವೆಲ್ಲ | ಕುಂದಿದಂತಿಹುದು ಸರ್ವಜ್ಞ |\
ಚರಜೀವನು ತಿಂದು | ಚರಿಸುವದು ಜಗವರ್ಧ | ಚರಿಸದಾ ಜೀವಿಗಳೆ ತಿಂದು ಜಗವರ್ಧ | ಚರಿಸುವದು ನೋಡು ಸರ್ವಜ್ಞ ||
ಚಲುವನಾದಡದೇನು ? | ಬಲವಂತನಹದೇನು ?| ಕುಲವೀರನಾಗಿ ಫಲವೇನು ? ಮಹಲಕ್ಷ್ಮಿ | ತೊಲಗಿ ಹೋಗಿರಲು | ಸರ್ವಜ್ಞ ||
ಚಿತ್ತವಿಲ್ಲದ ಗುಡಿಯ | ಸುತ್ತಿದೊಡೆ ಫಲವೇನು ? | ಎತ್ತು ಗಾಣವನು ಹೊತ್ತು ತಾ ನಿತ್ಯದಲಿ | ಸುತ್ತಿಬಂದಂತೆ ಸರ್ವಜ್ಞ ||
ಚೇಳನೇರಲು ಗುರುವು | ಕಾಳಗವು ಪಿರಿದಕ್ಕು | ಗಾಳಿಯಿಂ ವೇಳೆಯು ಕಿರಿದಕ್ಕು ಬೆಳೆಯಿಲ್ಲ | ಕೋಲಾಗವಕ್ಕು ಸರ್ವಜ್ಞ ||
ಜಂಗಮಕೆ ವಂಚಿಸನು | ಹಿಂಗಿರಲು ಲಿಂಗವನು | ಭಕ್ತರೊಳು ಪರಸತಿಗೆ ಒಲೆಯದಗೆ | ಭಂಗವೇ ಇಲ್ಲ ಸರ್ವಜ್ಞ ||
ಜಂಗಮನು ಭಕ್ತತಾ | ಲಿಂಗದಂತಿರಬೇಕು | ಭಂಸುತ ಪರರ ನಳಿವ ಜಂಗಮನೊಂದು | ಮಂಗನೆಂದರಿಗು ಸರ್ವಜ್ಞ ||
ಜಾಜಿಯಾ ಹೂ ಲೇಸು | ತೇಜಿವಾಹನ - ಲೇಸು | ರಾಜಮಂದಿರದೊಳಿರಲೇಸು ತಪ್ಪುಗಳ | ಮಾಜುವದು ಲೇಸು ಸರ್ವಜ್ಞ ||
ಜಾಣ ಜಾಣಗೆ ಲೇಸು | ಕೋಣ ಕೋಣಗೆ ಲೇಸು | ನಾಣ್ಯವದು ಲೇಸು ಜನರಿಂಗೆ ಊರಿಂಗೆ | ಗಾಣಿಗನು ಲೇಸು ಸರ್ವಜ್ಞ ||