ಒಟ್ಟು 33 ಕಡೆಗಳಲ್ಲಿ , 1 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರ ಹೂವಾದರು | ನಾತರೆ ಸಾಲದೆ ಜಾತಿ- ವಿಜಾತಿಯೆನಬೇಡ - ಶಿವನೊಲಿ ದಾತನೇ ಜಾತಿ ಸರ್ವಜ್ಞ
--------------
ಸರ್ವಜ್ಞ
ಯಾತರದು ಹೂವೇನು | ನಾತರದು ಸಾಲದೇ | ಜಾತಿ ವಿಜಾತಿಯೆನ್ನಬೇಡ | ದೇವನೊಲಿ ದಾತನೇ ಸರ್ವಜ್ಞ ||
--------------
ಸರ್ವಜ್ಞ
ಸಂಚಕವನೀಯದಲೆ | ಲಂಚಕರ ಹೊಗಿಸದಲೆ | ಅಂಚಿತವನೊದರಿ ಕಳುಹಿರೆ ಅಕ್ಕಸಾಲೆ | ವಂಚಿಸಲಿಕರಿಯ ಸರ್ವಜ್ಞ ||
--------------
ಸರ್ವಜ್ಞ
ಸಂತೆ ಸಾಲಕೆ ಹೊಲ್ಲ | ಕೊಂತ ಡೊಂಕಲು ಹೊಲ್ಲ | ಬೊಂತೆ ಹಚ್ಚಡವ ಹೊದೆ ಹೊಲ್ಲ ಆಗಲುಂ | ಚಿಂತೆಯೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಾಲ ಬಡವಂಗೆ ಹೊಲ್ಲ | ನಾಲಗೆಗೆ ಹುಸಿ ಹೊಲ್ಲ | ಹಾಲಿನಾ ಕೊಡಕೆ ಹುಳಿಹೊಲ್ಲ ಕಾಲಿಗಂ | ಕೋಲಿ ಹೊಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ಸಾಲ ಬಡವಗೆ ಹೊಲ್ಲ | ಸೋಲು ಜೂಜಿಗೆ ಹೊಲ್ಲ | ಬಾಲರು ಬೆನ್ನಲಿರ ಹೊಲ್ಲ ಬಡವಂಗೆ | ಓಲಗವೇ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು - ಹಣ್ಣುಂಬಂತೆ | ಸಾಲಿಗನು ಬಂದು ಎಳೆದಾಗ ಕಿಬ್ಬದಿಯ | ಕೀಲು ಮುರಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ತರುವಾಗ | ಹಾಲು ಬೋನುಂಡಂತೆ | ಸಾಲಿಗನು ಬಂದು ಕೇಳಿದರೆ ಕುಂಡಿಗೆ ಚೇಳು ಕಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಸಾಲವನು ಮಾಡುವದು | ಹೇಲ ತಾ ಬಳಿಸುವದು | ಕಾಲಿನ ಕೆಳಗೆ ಕೆಡಹುವದು ತುತ್ತಿನಾ | ಚೀಲ ನೋಡಯ್ಯ ಸರ್ವಜ್ಞ ||
--------------
ಸರ್ವಜ್ಞ
ಸಾಲಿಗನಲಿ ಮೇಣಕ್ಕ | ಸಾಲೆಯಲಿ ನಂಬಿಕೆಯು | ಜಾಲಗಾರನ ದಯೆ ಧರ್ಮ ಮುನ್ನಾವ | ಕಾಲಕ್ಕೂ ಇಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಾಲುವೇದವನೋದಿ | ಶೀಲದಲಿ ಶುಚಿಯಾಗಿ | ಶೂಲಿಯಾವದವನರಿಯದೊಡೆ ಗಿಳಿಯೋದಿ | ಹೇಲ ತಿಂದಂತೆ ಸರ್ವಜ್ಞ ||
--------------
ಸರ್ವಜ್ಞ
ಹಣವಿಗೊಂದು ರವಿ | ಪ್ಪಣಕೊಂದು ಬೇಳೆಯನು | ತ್ರಿಣಯನಾ ಮುಕುಟವಾದರಾ ಅಕ್ಕಸಾಲೆ | ಟೊನೆಯದೇ ಬಿಡನು ಸರ್ವಜ್ಞ ||
--------------
ಸರ್ವಜ್ಞ
ಹಾಲು ಬೋನವು ಲೇಸು | ಮಾಲೆ ಕೊರಳಿಗೆ ಲೇಸು | ಸಾಲವಿಲ್ಲದವನ ಮನೆ ಲೇಸು | ಬಾಲರ ಲೀಲೆ ಲೇಸೆಂದ ಸರ್ವಜ್ಞ ||
--------------
ಸರ್ವಜ್ಞ