ಒಟ್ಟು 27 ಕಡೆಗಳಲ್ಲಿ , 1 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟಲದ ಬಾಯಂತೆ | ಹುಟ್ಟುವದು ಲೋಕದೊಳು | ಮುಟ್ಟದದು ತನ್ನ ಹೆಂಡಿರನು ಕವಿಗಳಲಿ | ದಿಟ್ಟರಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಭಂಡಿಯಚ್ಚಿಗೆ ಭಾರ | ಮಿಂಡೆ ಮುದುಕಗೆ ಭಾರ | ಗುಂಡುಗಳು ಭಾರ ಭೈತ್ರಕ್ಕೆ ಲೋಕಕ್ಕೆ | ಕೊಂಡೆಯನೆ ಭಾರ ಸರ್ವಜ್ಞ ||
--------------
ಸರ್ವಜ್ಞ
ಮರನೊತ್ತಿಬೇಯುವದು | ಉರಿತಾಕಿ ಬೇಯದದು ? ಪುರಗಳ ನುಂಗಿ ಬೆಳಗುವದು ಲೋಕದಲಿ | ನರನಿದೇನೆಂಬೆ ಸರ್ವಜ್ಞ ||
--------------
ಸರ್ವಜ್ಞ
ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು | ಮಾತಿನಿಂ ಸರ್ವ ಸಂಪದವು ಲೋಕಕ್ಕೆ | ಮಾತೆ ಮಾಣಿಕವು ಸರ್ವಜ್ಞ ||
--------------
ಸರ್ವಜ್ಞ
ಮಿಥುನಕ್ಕೆ ಗುರು ಬರಲು | ಮಥನಲೋಕದೊಳಕ್ಕು | ಪೃಥ್ವಿಯೊಳಗೆಲ್ಲ ರುಜವಕ್ಕು ನರಪಶು | ಹಿತವಾಗಲಕ್ಕೂ ಸರ್ವಜ್ಞ ||
--------------
ಸರ್ವಜ್ಞ
ಮೀನಕ್ಕೆ ಶನಿ ಬರಲು | ಶಾನೆ ಕಾಳಗವಕ್ಕು | ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ | ಹಾನಿಯೇ ಬಕ್ಕು ಸರ್ವಜ್ಞ ||
--------------
ಸರ್ವಜ್ಞ
ಲೋಕಕ್ಕವಶ್ಯ ತಾ | ನೇಕಾಕಿ ಹೊಂಬೇರು | ನಾಕಕದು ಬೇರು ಪುಣ್ಯದಿಂದೆಲ್ಲದೊಡೆ | ಪಾತಕಕೆ ಬೇರು ಸರ್ವಜ್ಞ ||
--------------
ಸರ್ವಜ್ಞ
ವಚನದೊಳಗೆಲ್ಲವರು | ಶುಚಿವೀರ-ಸಾಧುಗಳು | ಕುಚ ಹೇಮಶಸ್ತ್ರ ಸೋಂಕಿದರೆ ಲೋಕದೊಳ| ಗಚಲದವರಾರು | ಸರ್ವಜ್ಞ ||
--------------
ಸರ್ವಜ್ಞ
ಸತ್ಯರೂ ಹುಸಿಯುವಡೆ | ಒತ್ತಿ ಹರಿದರೆ ಶರಧಿ | ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ| ಸಾಗುವದು ಸರ್ವಜ್ಞ ||
--------------
ಸರ್ವಜ್ಞ
ಹರಿವ ಹಕ್ಕಿ ನುಂಗಿ | ನೊರೆವಾಲ ಕುಡಿದಾತ | ಹರಿಹರನು ಅಕ್ಕು ಅಜನಕ್ಕು ಲೋಕಕ್ಕೆ | ಇರುವು ತಾನಕ್ಕು ಸರ್ವಜ್ಞ ||
--------------
ಸರ್ವಜ್ಞ
ಹಲ್ಲು ನಾಲಿಗೆಯಿಲ್ಲ | ಸೊಲ್ಲು ಸೋಜಿಗವಲ್ಲ | ಕೊಲ್ಲದೇ ಮೃಗವ ಹಿಡಿಯುವದು ಲೋಕದೊಳ | ಗೆಲ್ಲ ಠಾವಿನಲಿ ಸರ್ವಜ್ಞ ||
--------------
ಸರ್ವಜ್ಞ