ಒಟ್ಟು 1015 ಕಡೆಗಳಲ್ಲಿ , 1 ವಚನಕಾರರು , 540 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡ್ಡಬದ್ದಿಯು ಹೊಲ್ಲ| ಗಿಡ್ಡ ಬಾಗಿಲು ಹೊಲ್ಲ | ಹೆಡ್ಡರೊಡನಾಟ ಕೆರೆಹೊಲ್ಲ ಬಡಿಗ ತಾ| ರೊಡ್ಡನಿರ ಹೊಲ್ಲ ಸರ್ವಜ್ಞ ||
--------------
ಸರ್ವಜ್ಞ
ಅಣುರೇಣುವೃಂದ್ಯದಾ | ಪ್ರಣವದಾ ಬೀಜವನು | ಅಣುವಿನೊಳಗುಣವೆಂದರಿದಾ ಮಹಾತ್ಮನು | ತ್ರಿಣಯನೇ ಅಕ್ಕು ಸರ್ವಜ್ಞ ||
--------------
ಸರ್ವಜ್ಞ
ಅತ್ತಲಂಬಲಿಯೊಳಗೆ ಇತ್ತೊಬ್ಬನಿದ್ದಾನೆ | ಅತ್ತವನ ನೋಡು ಜನರೆಲ್ಲ ಈ ತುತ್ತ | ನೆಂತುಂಬರಯ್ಯ ಸರ್ವಜ್ಞ ||
--------------
ಸರ್ವಜ್ಞ
ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
--------------
ಸರ್ವಜ್ಞ
ಅಂದು ಕಾಮನ ಹರನು | ಕೊಂದನೆಂಬುದು ಪುಸಿಯು | ಇಂದುವದನೆಯರ ಕಡೆಗಣ್ಣ ನೋಟದಲಿ | ನಿಂದಿಹನು ಸ್ಮರನು ಸರ್ವಜ್ಞ ||
--------------
ಸರ್ವಜ್ಞ
ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ | ಬಂದರೆ ಬಾರೆಂದೆನರ್ಪ ಗರ್ವಿಯಾ | ದಂದುಗನೆ ಬೇಡ ಸರ್ವಜ್ಞ ||
--------------
ಸರ್ವಜ್ಞ
ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
--------------
ಸರ್ವಜ್ಞ
ಅಂಬು ಬಿಲ್ಲಿಗೆ ಲೇಸು | ಇಂಬು ಕೋಣೆಗೆ ಲೇಸು | ಸಂಬಾರ ಲೇಸು ಸಾರಿಗಂ ಊರಿಂಗೆ | ಕುಂಬಾರ ಲೇಸು ಸರ್ವಜ್ಞ ||
--------------
ಸರ್ವಜ್ಞ
ಅಂಬುದಿಯ ಗಾಢವನು | ಅಂಬರದ ಕಲಹವನು | ಶಂಭುವಿನ ಮಹಿಮೆ ಸತಿಯರಾ ಹೃದಯದಾ ಇಂಭರಿದವರಾರು ಸರ್ವಜ್ಞ ||
--------------
ಸರ್ವಜ್ಞ
ಅಬ್ಬೆಗರೆಷಣವೇಕೆ ? ಕಬ್ಬೇಕೆ ಬೋಡಂಗೆ | ನಿಬ್ಬಣವು ಏಕೆ ಕುರುಡಂಗೆ ವನದೊಳಗೆ | ಹೆಬ್ಬುಲಿದೇಕೆ ಸರ್ವಜ್ಞ ||
--------------
ಸರ್ವಜ್ಞ
ಅರಮನೆಯಲಿರುತಿಹುದು | ಕರದಲ್ಲಿ ಬರುತಿಹುದು | ಕೊರೆದು ವಂಶಜರ ತಿನುತಿಹುದು | ಕವಿಗಳಲಿ | ದೊರೆಗಳಿದ ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಅರಿತಂಗೆ ಅರವತ್ತು | ಮರೆತಂಗೆ ಮೂವತ್ತು | ಬರೆವಂಗೆ ರಾಜ್ಯ ಸರಿಪಾಲು | ಹಾರುವನು | ಬರೆಯದೇ ಕೆಟ್ಟ ಸರ್ವಜ್ಞ ||
--------------
ಸರ್ವಜ್ಞ
ಅರಿತವರ ಮುಂದೆ ತ | ನ್ನರಿವನ್ನು ಮೆರೆಯುವದು | ಅರಿಯದನ ಮುಂದೆ ಮೆರೆದರಾ ಹೊನ್ನೆಂಬ | ತೊರೆಯ ಲೆಚ್ಚಂತೆ ಸರ್ವಜ್ಞ ||
--------------
ಸರ್ವಜ್ಞ
ಅರಿತು ಮಾಡಿದ ಪಾಪ | ಮರೆತರದು ಪೋಪುದೇ | ಮರೆತರಾಮರವ ಬಿಡಿಸುವದು ಕೊರೆತೆಯದು | ಅರಿತು ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ಅರಿಯೆನೆಂಬುವದೊಂದು | ಅರಸು ಕೆಲಸವು ಕಾಣೋ | ಅರಿದೆನೆಂದಿಹನು ದೊರೆಗಳಾ ಆಳೆಂದು | ಮರೆಯಬೇಡೆಂದ ಸರ್ವಜ್ಞ ||
--------------
ಸರ್ವಜ್ಞ