ಒಟ್ಟು 32 ಕಡೆಗಳಲ್ಲಿ , 1 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾಷೆಯಿಂ ಮೇಲಿಲ್ಲ | ದಾಸನಿಂ ಕೀಳಿಲ್ಲಿ | ಮೋಸದಿಂದಧಿಕ ಕೇಡಿಲ್ಲ ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮಣ್ಣು ಬಿಟ್ಟವ ದೈವ | ಹೊನ್ನು ಬಿಟ್ಟವ ದೈವ | ಹೆಣ್ಣ ನೆರೆ ಬಿಟ್ಟರವ ದೈವ ಜಗಕೆ ಮು | ಕ್ಕಣ್ಣನೇ ದೈವ ಸರ್ವಜ್ಞ ||
--------------
ಸರ್ವಜ್ಞ
ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ | ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ | ಜಾತನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಮುಟ್ಟಿದೆಡರಿಗೆ ಅಭಯ | ಕೊಟ್ಟಾತ ದಾತಾರ | ಕೆಟ್ಟ ಕಾರ್ಯವನು ತಿದ್ದಿದರೆ ಅವನೊಂದು | ನೆಟ್ಟನೆಯ ದೈವ ಸರ್ವಜ್ಞ ||
--------------
ಸರ್ವಜ್ಞ
ಮೇರುವಿಂಗೆಣೆಯಿಲ್ಲ | ಧಾರುಣಿಕೆ ಸರಿಯಿಲ್ಲ | ತಾರಕೆನಿಗಿಂತ ಹಿತರಿಲ್ಲ ದೈವತಾ | ಬೇರೊಬ್ಬನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ರಾಮನಾಮವೆ ನಾಮ | ಸೋಮ ಶಂಕರ ಗುರುವು ಆ ಮಹಾರುದ್ರ ಅಧಿದೈವ ಜಗದೊಳಗೆ | ಭೀಮನೇ ಭಕ್ತ ಸರ್ವಜ್ಞ ||
--------------
ಸರ್ವಜ್ಞ
ಲೀಲೆಯಿಂ ಕಣ್ಣಿಲ್ಲ | ಗಾಲಿಯಿಂ ಬಟುವಿಲ್ಲ | ವಾಲಿಯಿಂದಧಿಕ ಬಲರಿಲ್ಲ ಪರದೈವ | ಶೂಲಿಯಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಶೇಷಿನಿಂ ಬಲರಿಲ್ಲ | ಮೋಸದಿಂ | ನೇಸರಿಂ ಜಗಕ ಹಿತರಿಲ್ಲ | ಪರದೈವ | ಈಶನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲ | ಬಿಂಗದಿಂ ಹೊರೆಯಿಲ್ಲ ಗಂಗೆಯಿಂದಧಿಕ ನದಿಯಿಲ್ಲ - ಪರದೈವ ಲಿಂಗದಿಂದಿಲ್ಲ ಸರ್ವಜ್ಞ
--------------
ಸರ್ವಜ್ಞ
ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ | ಗಂಗೆಯಿಂದಧಕ ನದಿಯಲ್ಲಿ ಪರದೈವ | ಲಿಂಗದಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಸತ್ಯಕ್ಕೆ ಸರಿಯಿಲ್ಲ | ಚಿತ್ತಕ್ಕೆ ಸ್ಥಿರವಿಲ್ಲ | ಹಸ್ತದಿಂದಧಿಕಹಿತರಿಲ್ಲ ಪರದೈವ | ನಿತ್ಯನಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ