ಒಟ್ಟು 27 ಕಡೆಗಳಲ್ಲಿ , 1 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ಪರಸ್ತ್ರೀಯ ಗಮನದಿಂ | ಪರಲೋಕವದು ಹಾನಿ | ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ | ನರಲೋಕದಲ್ಲಿ ಸರ್ವಜ್ಞ ||
--------------
ಸರ್ವಜ್ಞ
ಭಂಗಿಯನು ಸೇದುವನ | ಭಂಗವನು ಏನೆಂಬೆ | ಭಂಗಿಯಾಗುಂಗು ತಲೆಗೇರಕಾಡುವಾ| ಮಂಗನಂತಿಹನು ಸರ್ವಜ್ಞ ||
--------------
ಸರ್ವಜ್ಞ
ಸೃಷ್ಟಿಯಲಿ ಜಿನಧರ್ಮ | ಪಟ್ಟಗಟ್ಟಿರುತಿಕ್ಕು | ಕೆಟ್ಟ ಕೆಡಗುಣಗವೆಲ್ಲ ತಲೆಹೋದ | ಅಟ್ಟೆಯಂತಿಕ್ಕು ಸರ್ವಜ್ಞ ||
--------------
ಸರ್ವಜ್ಞ
ಹತ್ತುತಲೆ ಕೆಂಪು | ಮತ್ತಾರುತಲೆ ಕರಿದು | ಹೆತ್ತವ ನೊಡಲ ನುರಿಸುವದು | ಕವಿಗಳಿದರರ್ಥವನು ಪೇಳಿ ಸರ್ವಜ್ಞ ||
--------------
ಸರ್ವಜ್ಞ
ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ ನೆರೆ ಹತ್ತು ಜನನವಾ ಹರಿಗೆ - ಇವರುಗಳು ಕರೆಗೊರಲಗಣೆಯೆ ಸರ್ವಜ್ಞ
--------------
ಸರ್ವಜ್ಞ
ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ | ಸತಿಗಳಿಗೆ ಜಾವವರಿವವನ ಹೆಂಡತಿಗೆ ಮೊಲೆಯಿಲ್ಲ ನೋಡಾ ಸರ್ವಜ್ಞ ||
--------------
ಸರ್ವಜ್ಞ
ಹೊತ್ತಾರೆ ನೆರೆಯುವದು | ಹೊತ್ತೇರಿ ಹರಿಯುವದು | ಕತ್ತಲೆಯ ಬಣ್ಣ ಮಿಗಿಲಾಗಿ ಮಳೆಗಾಲ | ವೆತ್ತಣದಯ್ಯ ಸರ್ವಜ್ಞ ||
--------------
ಸರ್ವಜ್ಞ
ಹೊಲಬನರಿಯದ ಮಾತು | ತಲೆ ಬೇನೆ ಎನಬೇಡ | ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ | ಫಲ ಪಕ್ವದಂತೆ ಸರ್ವಜ್ಞ ||
--------------
ಸರ್ವಜ್ಞ