ಒಟ್ಟು 1015 ಕಡೆಗಳಲ್ಲಿ , 1 ವಚನಕಾರರು , 540 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಟ್ಟಡವಿಯಾ ಮಳೆಯು | ದುಷ್ಟರಾ ಗೆಳೆತನವು | ಕಪ್ಪೆಯಾದವಳ ತಲೆಬೇನೆ ಇವು ಮೂರು ಕೆಟ್ಟರೇ ಲೇಸು ಸರ್ವಜ್ಞ ||
--------------
ಸರ್ವಜ್ಞ
ನಂದೆಯನು ಭದ್ರೆಯನು | ಒಂದಾಗಿ ಅರ್ಧಿಸಲು | ಅಂದಿನ ತಿಥಿಯ ಸಮನಾಗೆ ಗ್ರಹಣ ತಾ | ಮುಂದೆ ಬಂದಕ್ಕು ಸರ್ವಜ್ಞ ||
--------------
ಸರ್ವಜ್ಞ
ನಂಬಿಗೆಯ ಉಳ್ಳನಕ | ಕೊಂಬುವದು ಸಾಲವನು | ನಂಬಿಗೆಯ ಕೆಟ್ಟ ಬಳಿಕ ಬೆಂದಾವಿಗೆಯ | ಕುಂಭದಂತಕ್ಕು ಸರ್ವಜ್ಞ ||
--------------
ಸರ್ವಜ್ಞ
ನರಕ ಪಾಪಿಷ್ಠರಿಗೆ | ಸುರಲೋಕ ( ದಿಟ್ಟರಿಗೆ ) ಗುರುಬೋಧೆಯಲ್ಲಿ ಜಗ ಉಳಿಗು - ಮಲ್ಲದೊಡೆ ಉರಿದು ಹೋಗುವುದು ಸರ್ವಜ್ಞ
--------------
ಸರ್ವಜ್ಞ
ನರರ ಬೇಡುವ ದೈವ | ವರವೀಯ ಬಲ್ಲುದೇ ತಿರಿವವರನಡರಿ ತಿರಿವಂತೆ - ಅದನರೆ ಹರನನೆ ಬೇಡು ಸರ್ವಜ್ಞ
--------------
ಸರ್ವಜ್ಞ
ನರಹತ್ಯವೆಂಬುದು | ನರಕದಾ ನಡುಮನೆಯು | ಗುರು ಶಿಶುವು ನರರ ಹತ್ಯವನು ಮಾಡಿದನ | ಇರವು ರೌರವವು ಸರ್ವಜ್ಞ ||
--------------
ಸರ್ವಜ್ಞ
ನಲ್ಲ ಒಲ್ಲಿಯನೊಲ್ಲ | ನೆಲ್ಲಕ್ಕಿ ಬೋನೋಲ್ಲ | ಅಲ್ಲವನು ಒಲ್ಲ | ಮೊಸರೊಲ್ಲ ಯಾಕೊಲ್ಲ | ಇಲ್ಲದಕೆ ಒಲ್ಲ ಸರ್ವಜ್ಞ ||
--------------
ಸರ್ವಜ್ಞ
ನಲ್ಲೆತ್ತು ಬಂಡಿ ಬಲ | ವಿಲ್ಲದಾ ಆರಂಭ | ಕಲ್ಲು ಕಳೆಗಳನು ಬಿಟ್ಟವನು ಹೊಲದೊಳಗೆ | ಹುಲ್ಲನೇ ಬೆಳೆವ ಸರ್ವಜ್ಞ ||
--------------
ಸರ್ವಜ್ಞ
ನಲ್ಲೆಯನು ಒಲ್ಲೆಂಬ | ಸೊಲ್ಲು ನಾಲಿಗೆ ಹೊಲೆಯು | ಬಲ್ಲಿದನು ಶ್ರವಣ ಸನ್ಯಾಸಿ ಇವರುಗಳು | ಎಲ್ಲಿ ಉದಿಸಿಹರು ಸರ್ವಜ್ಞ ||
--------------
ಸರ್ವಜ್ಞ
ನವಣೆಯನು ತಿಂಬುವನು | ಹವಣಾಗಿ ಇರುತಿಹನು ಭವಣಿಗಳಿಗವನು ಒಳಬೀಳನೀ ಮಾತು | ಠವಣೆಯಲ್ಲೆಂದ ಸರ್ವಜ್ಞ ||
--------------
ಸರ್ವಜ್ಞ
ನವಣೆಯಾ ಬೋನಕ್ಕೆ | ಹವಣಾದ ತೊಗೆಯಾಗಿ | ಕವಣೆಗಲ್ಲದಷ್ಟು ಬೆಣ್ಣೆಯಿದರೂಟದಾ | ಹವಣ ನೋಡೆಂದ ಸರ್ವಜ್ಞ ||
--------------
ಸರ್ವಜ್ಞ
ನಾಡೆಲೆಯ ಮೆಲ್ಲುವಳ | ಕೂಡೆ ಬಯಸುತ ಹೋಗೆ ಕೂಡ ಗೂಡ ಸೀರೆ ಮೊಲೆಗಟ್ಟಿನಾ ಯಕಿಯ | ಕುಂಡೆಯಾಡೆಂದ ಸರ್ವಜ್ಞ ||
--------------
ಸರ್ವಜ್ಞ
ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ | ತಾನೆ ತಾನಾಗಿ ಇಪ್ಪುದೇ ಬೊಮ್ಮದಾ | ಸ್ಥಾನವೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ನಾನು ನೀನು ಭೇದಗ | ಳೇನು ಬೊಮ್ಮಗೆ ಇಲ್ಲ | ತಾನೆ ತಾನಾಗಿಪ್ಪುದೆ ಬೊಮ್ಮದಾ | ಸ್ಥಾನವೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ನಾಲಿಗೆಗೆ ನುಣುಪಿಲ್ಲ | ಹಾಲಿಗಿಂ ಬಿಳಿಪಿಲ್ಲ | ಕಾಲನಿಂದಧಿಕ ಅರಿಯಿಲ್ಲ ದೈವವುಂ | ಶೂಲಿಯಿಂದಿಲ್ಲ ಸರ್ವಜ್ಞ ||
--------------
ಸರ್ವಜ್ಞ