ಒಟ್ಟು 251 ಕಡೆಗಳಲ್ಲಿ , 1 ವಚನಕಾರರು , 200 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಸಿವಾತ ದೇಗುಲದ | ದೆಸೆಯತ್ತ ಮುಂತಾಗಿ | ನೊಸಲೆತ್ತಿ ಕರವ ಮುಗಿದಿಹರೆ | ಅಷ್ಟುದ್ದ ಹರಿವನೆಂದರಿಗು ಸರ್ವಜ್ಞ ||
--------------
ಸರ್ವಜ್ಞ
ಹೆಂಡತಿಗೆ ಅಂಜಿವಾ | ಗಂಡನನು ಏನೆಂಬೆ | ಹಿಂಡು ಕೋಳಿಗಳು ಮುರಿತಿಂಬ ನರಿ ನಾಯ | ಕಂಡೋಡಿದಂತೆ ಸರ್ವಜ್ಞ ||
--------------
ಸರ್ವಜ್ಞ
ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನ್ನು | ಕಣ್ಣಿಂದ ಕಂಡು ಮನದಲ್ಲಿ ಬಯಸದಿಹ | ಅಣ್ಣಗಳು ಯಾರು ಸರ್ವಜ್ಞ ||
--------------
ಸರ್ವಜ್ಞ
ಹೊಲಬನರಿಯದ ಮಾತು | ತಲೆ ಬೇನೆ ಎನಬೇಡ | ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ | ಫಲ ಪಕ್ವದಂತೆ ಸರ್ವಜ್ಞ ||
--------------
ಸರ್ವಜ್ಞ
ಹೊಳೆಯ ನೀರೊಬ್ಬನೇ | ಅಳೆಯಬಹುದೆಂದರವ | ಅಳೆಯಬಹುದೆಂದು ಎನಬೇಕು ಮೂರ್ಖನಂ | ಗೆದೆಯಲಳವಲ್ಲ | ಸರ್ವಜ್ಞ ||
--------------
ಸರ್ವಜ್ಞ