ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒಂದು ಒಂಭತ್ತು ತಲೆ | ಸಂದ ತೋಳಿಪ್ಪತ್ತು | ಬಂಧುಗಳನ್ನೆಲ್ಲ ಕೆಡಿಸಿತು ಪತಿವ್ರತೆಯ | ತಂದ ಕಾರಣದಿ ಸರ್ವಜ್ಞ ||
ಒಂದು ಜೀವವನೊಂದು | ತಿಂದು ಉಳಿದಿಹಜಗದೊ | ಳೆಂದೂ ಕೊಲಲಾಗದೆಂಬಾ ಜಿನಧರ್ಮ | ನಿಂದಿಹುದು ಹೇಗೆ ಸರ್ವಜ್ಞ ||
ಒಂದೂರ ಗುರುವಿರ್ದು | ವಂದನೆಯ ಮಾಡದೆ ಸಂದಿಸೆ ಕೊಳ ತಿನಿತಿಪರ್ವನ - ಇಅರವು ಹಮ್ದಿಯ ಇಅರವು ಸರ್ವಜ್ಞ
ಒಬ್ಬರಿದ್ದರೆ ಸ್ವಾಂತ | ಇಬ್ಬರಲಿ ಏಕಾಂತ | ಇಬ್ಬರಿಂದೊಬ್ಬನರಿದು ಬೇರೊಬ್ಬನಿಂ | ಹಬಿ ಲೋಕಾಂತ ಸರ್ವಜ್ಞ ||
ಒಮ್ಮೆ ಸೀತರೆ ಹೊಲ್ಲ | ಇಮ್ಮೆ ಸೀತರೆ ಲೇಸು ಕೆಮ್ಮಿಕೇಕರಿಸಿ ಉಗುಳುವಾ ಲೇಸು | ಆ ಬೊಮ್ಮಗು ಇಲ್ಲ ಸರ್ವಜ್ಞ ||
ಒಮ್ಮೆಯುಂಡವ ತ್ಯಾಗಿ | ಇನ್ನೊಮ್ಮೆಯುಂಡವ ಭೋಗಿ | ಬಿಮ್ಮೆಗುಂಡವನು ನೆರೆಹೋಗಿ | ಯೋಗಿ ತಾ ಸುಮ್ಮನಿರುತಿ ಸರ್ವಜ್ಞ ||
ಒಲೆಗುಂಡನೊಬ್ಬನೇ | ಮೆಲಬಹುದು ಎನ್ನುವಡೆ | ಮೆಲಭುದು ಎಂಬುವನೆ ಜಾಣ ಮೂರ್ಖನಂ | ಗೆಲಲಾಗದಯ್ಯ ಸರ್ವಜ್ಞ ||
ಒಸರುವಾ ತೊರೆ ಲೇಸು | ಹಸುನಾದ ಕೆರೆ ಲೇಸು | ಸರವಿರುವವನ ನೆರೆ ಲೇಸು | ಸಾಗರವು ವಸುಧಿಗೆ ಲೇಸು ಸರ್ವಜ್ಞ ||
ಒಳಗೊಂದು ಕೋರುವನು | ಹೊರಗೊಂದು ಕೋರುವನು | ಕೆಳಗೆಂದು ಬೀಳ ಹಾರುವನ ಸರ್ಪನಾ | ಸುಳಿವು ಬೇಡೆಂದ ಸರ್ವಜ್ಞ ||
ಒಳ್ಳೆಯನು ಇರದೂರ | ಕಳ್ಳನೊಡನಾಟವು | ಸುಳ್ಳನಾ ಮಾತು ಇವು ಮೂರು ಕೆಸರೊಳಗೆ | ಮುಳ್ಳು ತುಳಿದಂತೆ ಸರ್ವಜ್ಞ ||
ಓಂಕಾರ ತಾನಲ್ಲ | ಹ್ರಾಂಕಾರ ಮುನ್ನಲ್ಲ ಆಂಕಾಶತಳವ ಮೀರೆಹುದು - ಹರಿಯಜರು ತಾಂ ಕಾಣರಯ್ಯ ಸರ್ವಜ್ಞ
ಓಂಕಾರ ಮುಖವಲ್ಲ | ಆಕಾರವದಕಿಲ್ಲ | ಆಕಾಶದಂತೆ ಅಡಗಿಹುದು ಪರಬೊಮ್ಮ | ವೇಕಾಣದಯ್ಯ ಸರ್ವಜ್ಞ ||
ಓರ್ವನಲ್ಲದೆ ಮತ್ತೆ | ಇರ್ವರುಂಟೇ ಮರುಳೆ ಸರ್ವಜ್ಞನೊರ್ವ ಜಗಕೆಲ್ಲ - ಕರ್ತಾರ ನೊರ್ವನೇ ದೇವ ಸರ್ವಜ್ಞ
ಓಲಯಿಸುತಿರುವವನು | ಮೇಲೆನಿಸುತ್ತಿದ್ದರು | ಸೋಲದಾ ಬುದ್ಧಿಯಿರುವವಲಿ ಭಾಗ್ಯದಾ | ಕೀಲು ಕಾಣಯ್ಯ ಸರ್ವಜ್ಞ ||
ಕಂಚಿಯಾ ಫಲಲೇಸು | ಮಿಂಚು ಮುಗಿಲಿಗೆ ಲೇಸು | ಕೆಚ್ಚನೆಯ ಸತಿಯು ಇರಲೇಸು ಊರಿಂಗೆ | ಪಂಚಾಳ ಲೇಸು ಸರ್ವಜ್ಞ ||