ಒಟ್ಟು 758 ಕಡೆಗಳಲ್ಲಿ , 1 ವಚನಕಾರರು , 756 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎತ್ತು ಇಲ್ಲದ ಬಂಡಿ | ಒತ್ತೊತ್ತಿ ನಡಿಸುವರು | ಸುತ್ತಲೂ ರಾಜ್ಯವಾಳುವರು ಕಡೆಯಲ್ಲಿ | ಮೃತ್ಯುಹೊಂದುವರು | ಸರ್ವಜ್ಞ ||
ಎತ್ತೆಮ್ಮೆ ಹೂಡುವದು | ಉತ್ತೊಮ್ಮೆ ಹರಗುವದು | ಬಿತ್ತೊಮ್ಮೆ ಹರಗಿ ಕಳೆತೆಗೆದರಾ ಬೆಳೆಯು | ಎತ್ತುಗೈಯುದ್ದ ಸರ್ವಜ್ಞ ||
ಎಂಬಲವು ಸೌಚವು | ಸಂಜೆಯೆಂದೆನಬೇಡ | ಕುಂಜರವು ವನವ ನೆನೆವಂತೆ ಬಿಡದೆ ನಿ | ರಂಜನನ ನೆನೆಯೋ ಸರ್ವಜ್ಞ ||
ಎಮ್ಮೆ ಹಯನವು ಲೇಸು | ಕಮ್ಮನಾಮ್ಲವು ಲೇಸು | ಸುಮ್ಮನೆಯ ಒಡವೆ ಬರಲೇಸು ಊರಿಂಗೆ | ಕಮ್ಮಾರ ಲೇಸು ಸರ್ವಜ್ಞ ||
ಎರೆಯನ್ನು ಉಳುವಂಗೆ | ದೊರೆಯನ್ನು ಪಿಡಿದಂಗೆ | ಉರಗ ಭೂಷಣನ ನೆನೆವಂಗೆ ಭಾಗ್ಯವು | ಅರಿದಲ್ಲವೆಂದು ಸರ್ವಜ್ಞ ||
ಎಲವು-ಕರಳ್-ನರ-ತೊಗಲು | ಬಿಲರಂದ್ರ-ಮಾಂಸದೊಳು | ಹಲತೆರೆದ ಮಲವು ಸುರಿದಿಲು | ಕುಲಕ್ಕಿನ್ನು | ಬಲವೆಲ್ಲಿ ಹೇಳು ಸರ್ವಜ್ಞ ||
ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ
ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ | ತೊಲೆ ಕಂಭವಿಲ್ಲ ಗಗನಕ್ಕೆ ದೇವರಲಿ | ಕುಲಭೇದವಿಲ್ಲ ಸರ್ವಜ್ಞ ||
ಎಲುವು - ತೊಗಲ್ - ನರ - ಮಾಂಸ | ಬಲಿದ ಚರ್ಮದ ಹೊದಿಕೆ | ಹೊಲೆ - ರಕ್ತ ಶುಕ್ಲದಿಂದಾದ ದೇಹಕ್ಕೆ | ಕುಲವಾವುದಯ್ಯ ಸರ್ವಜ್ಞ ||
ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ | ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ | ವೆಲ್ಲವರಿಗಿಲ್ಲ ಸರ್ವಜ್ಞ ||
ಎಲ್ಲರನು ಬೇಡಿ | ಹಲ್ಲು ಬಾಯಾರುವು ದೆ ಬಲ್ಲಂತೆ ಶಿವನ ಭಜಿಸಿದೊಡೆ - ಶಿವ ದಾನಿ ಇಲ್ಲನ್ನಲರೆಯ ಸರ್ವಜ್ಞ
ಎಲ್ಲರೂ ಶಿವನೆಂದ | ರೆಲ್ಲಿಹುದು ಭಯವಯ್ಯಾ | ಎಲ್ಲರೂ ಶಿವನ ನೆನೆಯುವಡೆ ಕೈಲಾಸ | ಎಲ್ಲಿಯೇ ಇಹುದು ಸರ್ವಜ್ಞ ||
ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು | ಎಲ್ಲರೂ ಶಿವನ ಮರೆದಿಹರೆ ಕೈಲಾಸ | ದಲ್ಲಿ ಹಾಳಕ್ಕು ಸರ್ವಜ್ಞ ||
ಎಲ್ಲವರು ಬಯ್ದರೂ | ಕಲ್ಲು ಕೊಂಡೊಗೆದರೂ | ಅಲ್ಲದಾ ಮಾತು ನುಡಿದರೂ ಶಿವನಲ್ಲಿ | ತಲ್ಲಣಿಸು ಬೇಡ ಸರ್ವಜ್ಞ ||
ಎಲ್ಲವರು ಹಿರಿಯವರು | ಬಲ್ಲವರು ಗುರು ಅವರು ನಲ್ಲಳುರೆ ಮುಂದೆ ಸುಳಿದರೇ ಲೋಕದೊಳ | ಗೊಲ್ಲದವರಾರು ಸರ್ವಜ್ಞ ||