ಒಟ್ಟು 180 ಕಡೆಗಳಲ್ಲಿ , 1 ವಚನಕಾರರು , 155 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆರೆಗಳೆಡೆ ಉರಗನನಾ | ಗರಳ ತಾ ತಪ್ಪುವದೆ | ಪರತತ್ವಬೋಧೆಯನರಿಯದಾ ಶ್ರವಣರು | ಸಿರಿಯ ತೊರೆದರೇನು ಸರ್ವಜ್ಞ ||
--------------
ಸರ್ವಜ್ಞ
ಹೇನು ಕೂರೆಗಳನ್ನು | ತಾನಾ ಜಿನಕೊಲ್ಲ | ಸ್ಥಾನ ಪಲ್ಲಟವ ಮಾಡದಡೆ ಆ ಮೇಲೆ | ಏನಾದುದರಿಯ ಸರ್ವಜ್ಞ ||
--------------
ಸರ್ವಜ್ಞ
ಹೊಟ್ಟೆಗುಣ ಕೊಟ್ಟವಗೆ | ಸಿಟ್ಟು ನೆರೆ ಬಿಟ್ಟವಗೆ | ಬಟ್ಟೆಯಾ ಮುಳ್ಳು ಸುಟ್ಟವಗೆ ಬಹು ಭವದ | ಹುಟ್ಟು ತಾನಿಲ್ಲ ಸರ್ವಜ್ಞ ||
--------------
ಸರ್ವಜ್ಞ
ಹೊತ್ತಾರೆ ನೆರೆಯುವದು | ಹೊತ್ತೇರಿ ಹರಿಯುವದು | ಕತ್ತಲೆಯ ಬಣ್ಣ ಮಿಗಿಲಾಗಿ ಮಳೆಗಾಲ | ವೆತ್ತಣದಯ್ಯ ಸರ್ವಜ್ಞ ||
--------------
ಸರ್ವಜ್ಞ
ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ | ಹೊತ್ತಾಗಿ ನುಡಿದ ಮಾತು ಕೈಜಾರಿದಾ | ಮುತ್ತಿನಂತಿಹುದು ಸರ್ವಜ್ಞ ||
--------------
ಸರ್ವಜ್ಞ